ಬೆಂಗಳೂರು: ಅಮೆರಿಕದ ರಕ್ಷಣಾ ಕ್ಷೇತ್ರದ ದಿಗ್ಗಜ ಸಂಸ್ಥೆ ಲಾಖ್ಹೀಡ್ ಮಾರ್ಟಿನ್ ಭಾರತದಲ್ಲಿ ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದೆ.
ಇದು ಏಷ್ಯಾದಲ್ಲೇ ಅತಿದೊಡ್ಡ ಕೇಂದ್ರವಾಗಿರಲಿದೆ. ವಿಶ್ವದಲ್ಲೇ ಮೂರನೇ ಅತಿದೊಡ್ಡ ಕೇಂದ್ರವಾಗಿರಲಿದೆ. ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳ ದುರಸ್ತಿ ಮತ್ತು ನಿರ್ವಹಣೆಗೆಂದೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವ ಕೇಂದ್ರ ಇದಾಗಿರಲಿದೆ. ಈಕುರಿತು ಲಾಖ್ಹೀಡ್ ಮಾರ್ಟಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ, ಸಿಇಒ ವಿಲಿಯಮ್ ಬ್ಲೇರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಉಪಗ್ರಹಗಳು, ಸೆನ್ಸರ್ಗಳು, ಗ್ರೌಂಡ್ ಸ್ಟೇಷನ್ಗಳು ಹಾಗೂ ಮಷಿನ್ ಸೊಲ್ಯೂಷನ್ಸ್ಗಳಿಗೆ ಸಂಬಂಧಿಸಿ ಭಾರತದಲ್ಲಿ ಕಾರ್ಯಾಚರಣೆ ವಿಸ್ತರಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಮತ್ತು ಇತರ ಸ್ಟಾರ್ಟಪ್ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಪ್ರದರ್ಶನ ಮಳಿಗೆಯಲ್ಲಿ ಲಾಖ್ಹೀಡ್ ಮಾರ್ಟಿನ್ ಕಂಪನಿಯು ಎಫ್-21 ಯುದ್ಧವಿಮಾನ, ಸಿ-130ಜೆ ಟ್ರಾಸ್ಪೋರ್ಟ್ ಏರ್ಕ್ರಾಫ್ಟ್, ಎಂಎಚ್-60ಆರ್ ರೋಮೊ ಮಲ್ಟಿ-ಮಿಷನ್ ಹೆಲಿಕಾಪ್ಟರ್, ಜಾವೆಲಿನ್ ವೆಪನ್ ಸಿಸ್ಟಂ ಹಾಗೂ ಎಸ್-92 ಮಲ್ಟಿ ರೋಲ್ ಹೆಲಿಕಾಪ್ಟರ್ಗಳನ್ನು ಪ್ರದರ್ಶನಕ್ಕಿರಿಸಿದೆ. ಈ ಪೈಕಿ ಎಫ್-21 ಯುದ್ಧವಿಮಾನದ ಕಾಕ್ಪಿಟ್ ಡೆಮೊನ್ಸ್ಟ್ರೇಟರ್ ಗಮನ ಸಳೆಯುತ್ತಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


