ದೇಶದಲ್ಲಿ ಹಣದುಬ್ಬರ ತೀವ್ರಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಎಚ್ಚರಿಸಿದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮೊಟ್ಟೆ, ಮಾಂಸ, ಮೀನು, ಹಾಲು ಮುಂತಾದವುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ ಸ್ಪಷ್ಟಪಡಿಸಿದೆ.
ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 5.72 ರಿಂದ ಫೆಬ್ರವರಿಯಲ್ಲಿ ಶೇ 6.52 ಕ್ಕೆ ಏರಿದೆ. ಆಹಾರ ಉತ್ಪನ್ನಗಳ ಬೆಲೆಗಳು ಡಿಸೆಂಬರ್‌ನಲ್ಲಿ 4.2 ರಿಂದ ಜನವರಿಯಲ್ಲಿ 6 ಕ್ಕೆ ಏರಿತು. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ತೀವ್ರವಾಗಿದೆ. ನಗರ ದರ ಶೇ.6ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.6.9ಕ್ಕೆ ಏರಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದ್ದ ಶೇಕಡ ಆರಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಧಾನ್ಯಗಳು ಶೇ.16.12, ಮೊಟ್ಟೆ ಶೇ.8.78 ಮತ್ತು ಹಾಲು ಶೇ.8.79ರಷ್ಟು ಏರಿಕೆಯಾಗಿದೆ. ಆದರೆ ತರಕಾರಿ ಶೇ.11.7ರಷ್ಟು ಕುಸಿತ ಕಂಡಿದೆ. ಕಳೆದ ವಾರ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿತ್ತು. ಚಿಲ್ಲರೆ ವಲಯದಲ್ಲಿ ಶೇ.4ರಷ್ಟು ಬೆಲೆ ಏರಿಕೆಯನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಗೆ ಸೂಚನೆ ನೀಡಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


