ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರ ಆತ್ಮಹತ್ಯಾ ದಾಳಿಯಿಂದ 40 ಮಂದಿ ಸಿಆರ್ಪಿಎಫ್ ಯೋಧರು ಅಸುನೀಗಿ ಇಂದಿಗೆ 4 ವರ್ಷಗಳು ಗತಿಸಿದ್ದು ಪ್ರೇಮಿಗಳ ದಿನಾಚರಣೆ ದಿನವು ಭಾರತೀಯರ ಪಾಲಿಗೆ ಕಪ್ಪು ದಿನದಂತಾಗಿದೆ.
ಪ್ರತಿವರ್ಷ ಈ ಘಟನೆ ನೆನಸಿಕೊಂಡು ಭಾರತೀಯರ ಆಕ್ರೋಶ ಉಕ್ಕುವುದು ಸಾಮಾನ್ಯ. 2019 ಫೆಬ್ರುವರಿ 14ರಂದು ನಡೆದ ಅಂದಿನ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದು 4 ವರ್ಷಗಳ ಹಿಂದೆ ಇದೇ ದಿನ 40 ಮಂದಿ ಸಿಆರ್ಪಿಎಫ್ ಜವಾನರನ್ನು ಬಲಿತೆಗೆದುಕೊಂಡು ಉಗ್ರ ಆತ್ಮಹತ್ಯಾ ದಾಳಿ ಘಟನೆಯನ್ನು ಎಂದಾದರೂ ಮರೆಯಲು ಸಾಧ್ಯವಾ? ಪ್ರತೀ ವರ್ಷವೂ ಇಡೀ ದೇಶ ಈ ಘಟನೆಯನ್ನು ನೆನಪಿಸಿಕೊಂಡು ಕುದಿದುಹೋಗುತ್ತದೆ., ಅಭಿವೃದ್ಧಿಯತ್ತ ದೇಶ ಸಾಗಲು ವೀರಯೋಧರ ಬಲಿದಾನ ಪ್ರೇರಣೆಯಾಗಲಿ ಎಂದಿದ್ದಾರೆ.
ಪುಲ್ವಾಮದಲ್ಲಿ ಈ ದಿನ ನಾವು ಕಳೆದುಕೊಂಡ ವೀರರನ್ನು ಸ್ಮರಿಸುತ್ತಿದ್ದೇನೆ. ಅವರ ಮಹಾ ಬಲಿದಾನವನ್ನು ನಾವ್ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಎದೆಗಾರಿಕೆಯು ಪ್ರಬಲ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


