ಸರಗೂರು: ತಾಲೂಕಿನ ಕಂದೇಗಾಲ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಕೊಂಡೋತ್ಸವ ಜರುಗಿತು.
ಮಹದೇಶ್ವರ ರಥಗೆ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು.
ಜಾತ್ರಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೇತೃತ್ವದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಬೆಳಗ್ಗೆ 9:15ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ ‘ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..’ ಎಂಬ ಉದ್ಗಾರ ಕೂಗಿ ಕೊಂಡವನ್ನು ಆದಿದರು .
ಹೂವು, ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.
ನವ ವಧುವರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು ಜವನ, ಧವಸ ಧಾನ್ಯ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು.
ರಥ ಸಾಗುವ ಹಾದಿಯಲ್ಲಿ ವಾದ್ಯ ಮೇಳ, ಛತ್ರಿ ಚಾಮರಗಳು, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿ ಉತ್ಸವದ ಮೆರುಗು ಹೆಚ್ಚಿಸಿದವು.
ಜಾತ್ರಾ ಸಮಿತಿ ವತಿಯಿಂದ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದು ಬಿಜೆಪಿ ಮುಖಂಡ ಅಪ್ಪಣ್ಣ ಚಾಲನೆ ನೀಡಿದರು.
ರಥ ಎಳೆದ ಅಧಿಕಾರಿಗಳು: ರಥೋತ್ಸವಕ್ಕ ಚಾಲನೆ ದೊರೆಯುತ್ತಿದ್ದಂತೆ ಶ್ರೀ ಮಲೆ ಮಹದೇಶ್ವರಸ್ವಾಮಿ ಸಮಿತಿ ಗೌರವಾಧ್ಯಕ್ಷ ಮಾಜಿ ಜಿಪಂ ಸದಸ್ಯರು ಚಿಕ್ಕವೀರನಾಯಕ, ಎಂಪಿ ನಾಗರಾಜು, ಸಮಿತಿ ಅಧ್ಯಕ್ಷ ಪಟೇಲರಾಜಪ್ಪ, ಕಾರ್ಯದರ್ಶಿ ಸೋಮಣ್ಣ, ಯೂತ್ ಕ್ಲಬ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲಶಿವರಾಜು, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ರಥ ಎಳೆದರು.
ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ ಎಂದು ತಿಳಿಸಿದರು.
ರಥೋತ್ಸವದ ಬಳಿಕ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು, ಹಲವರು ಸರತಿ ಸಾಲಿನಲ್ಲಿ ಸಾಗಿ ಮಾದಪ್ಪನ ದರ್ಶನ ಪಡೆದರು.ಸಾವಿರಾರೂ ಭಕ್ತರು ಅನ್ನಸಂತರ್ಪಣೆಯನ್ನು, ಲಾಡು ಪ್ರಸಾದವನ್ನು ಸ್ವೀಕರಿಸಿದರು.
ಸಮಿತಿಯ ಗೌರವಾಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಚಿಕ್ಕವೀರನಾಯಕ,ಎಂಪಿ ನಾಗರಾಜು, ಸಮಿತಿ ಅಧ್ಯಕ್ಷ ಪಟೇಲ ರಾಜಪ್ಪ, ಕಾರ್ಯದರ್ಶಿ ಸೋಮಣ್ಣ, ಯೂತ್ ಕ್ಲಬ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲಶಿವರಾಜು, ಖಜಾಂಚಿ ಮಾದಪ್ಪ,ಗ್ರಾಪಂ ಸದಸ್ಯ ರವಿ, ಬಿಜೆಪಿ ಮುಖಂಡ ಅಪ್ಪಣ್ಣ, ಮಂಜುನಾಥ,ಪಪಂ ಉಪಾಧ್ಯಕ್ಷ ವಿನಾಯಕ,ಮಹೇಶ್,ಭಿಮನಕೊಲ್ಲಿ ಮಹದೇಶ್ವರ ಸಮಿತಿ ಕಾರ್ಯದರ್ಶಿ ಜಗದೀಶ್,ಶಿವನಾಗಪ್ಪ, ಸಮಿತಿ ಸದಸ್ಯರು ಚೆನ್ನಯ್ಯ,ಮರಿದಾಸಯ್ಯ,ಅಂಕನಾಯಕ,ಲಕ್ಷಣಚಾರಿ, ದೇವನೂರು ಮಹಾದೇವಪ್ಪ, ಎಲ್ಲಾ ಸಾಮಾಜ ಯಜಮಾನರು ಮತ್ತು ಮುಖಂಡರು ಭಾಗಿಯಾಗಿದ್ದರು
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


