ಸಿನಿಮಾ ನಟರನ್ನ ರಾಜಕೀಯದತ್ತ ಸೆಳೆಯುವ ಕಾರ್ಯ ಸಾಮಾನ್ಯವಾಗಿದೆ. ಅದರಂತೆಯೇ ಸ್ಯಾಂಡಲ್ ವುಡ್ ಹೀರೋ ಸುದೀಪ್ ಅವರನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಹ್ವಾನಿಸಿದ್ದವು ಎಂಬ ಸುದ್ದಿ ಹರಿದಾಡುತ್ತಿತ್ತು ಅದಕ್ಕೆ ಕುದ್ದಾಗಿ ಕಿಚ್ಚ ಸುದೀಪ್ ಹೇಳಿಕೆ ನೀಡುವುದರ ಮೂಲಕ ತೆರೆ ಎಳೆದಿದ್ದಾರೆ.
ನಟ ಸುದೀಪ್ ರಾಜಕೀಯದತ್ತ ಕರೆತರಲು ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಸುದೀಪ್ ಮನೆಗೆ ಭೇಟಿ ನೀಡಿದ್ದರು. ರಮ್ಯಾ ಮೂಲಕವೂ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು ಎಂಬ ಮಾತುಗಳು ಕೇಳಿಬರುತ್ತಿತ್ತು. ಇತ್ತ ಬಿಜೆಪಿಯಿಂದ ಸಚಿವ ಕೆ.ಸುಧಾಕರ್ ಸೇರಿದಂತೆ ಹಲವರು ಸುದೀಪ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ರಾಜಕಾರಣಿಗಳು ಭೇಟಿಯಾದ ಸಂದರ್ಭದಲ್ಲೂ ಇದು ರಾಜಕೀಯ ಭೇಟಿ ಅಲ್ಲವೆಂದೇ ಹೇಳುತ್ತಿದ್ದರು.
ಆದರೆ, ಕಿಚ್ಚ ಸುದೀಪ್ ಇದರ ಕುರಿತು ಮೊದಲ ಭಾರಿಗೆ ಪ್ರತಿಕ್ರಯಿಸಿದ್ದು ಎರಡೂ ಪಕ್ಷಗಳು ತಮ್ಮನ್ನು ಸಂಪರ್ಕಿಸಿರುವುದು ನಿಜವೆಂದು ತಿಳಿಸಿದ್ದಾರೆ. ‘ಮನೆಗೆ ಬಂದಿರುವ ವಿಚಾರವನ್ನು ತೇಲಿಸಲು ಹೋಗುವುದಿಲ್ಲ. ರಾಜಕಾರಣಿಗಳು ಮನೆಗೆ ಬಂದಿದ್ದಾರೆ ಅಂದರೆ, ಕಾರಣ ರಾಜಕಾರಣವೇ ಇರುತ್ತದೆ ಎಂದಿದ್ದಾರೆ ರಾಜಕೀಯದತ್ತ ನಾನು ಹೋಗುವುದಾರೆ ಅದನ್ನು ಹೇಳುತ್ತೇನೆ ಎನ್ನುವುದರ ಮೂಲಕ ರಾಜಕೀಯಕ್ಕೆ ಸಧ್ಯಕ್ಕೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


