ಬೆಂಗಳೂರು: ಭಾರತೀಯ ಜನತಾ ಪಕ್ಷದ ಆಡಳಿತದ ಅವಧಿ ಕೊನೆಯ ಆಯವಯವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಧಾನಸೌಧದಲ್ಲಿ ಬೆಳಗ್ಗೆ 10: 15_ ಗಂಟೆಗೆ ತನ್ನ ಎರಡನೇ ಅವಧಿಯ ಬಜೆಟ್ ಅನ್ನು ಮಂಡನೆ ಮಾಡುವ ಪ್ರಾರಂಭದಲ್ಲಿ ಕುವೆಂಪು ಅವರ ಬದಲಾವಣೆಯ ಕಾಲ ಬರುತ್ತಾ ಇದೆ. ಕವನದ ಮೂಲಕ ಕಾಂಗ್ರೆಸ್ಸಿಗೆ ಪರೋಕ್ಷವಾಗಿ ಟಾಂಗ್ ನೀಡಿ ನೀವು ಜನರ ಕಿವಿಗೆ ಹೂ ಬಿಟ್ಟಿದ್ದೀರಿ ,ಅದಕ್ಕೆ ಜನ ನಿಮ್ಮ ಕಿವಿಗೆ ಹೂವಿಟ್ಟಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಭಟಿಸಿ ಸರ್ಕಾರ ಬರಿ ಸುಳ್ಳು ಭರವಸೆಗಳನ್ನು ನೀಡಿ ಜನರ ಕಿವಿಗೆ ಹೂವು ಇಡ್ತಾ ಇದೆ. ನೀವು ಘೋಷಿಸಿದ ಯೋಜನೆಗಳನ್ನು ಒಂದನ್ನು ಜಾರಿಗೆ ತಂದಿದ್ದೀರಾ?
ಎಂದು ಪ್ರಶ್ನಿಸಿ ಸದನದಲ್ಲಿ ಕೆಲಕ್ಷಣ ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಭಾಧ್ಯಕ್ಷರು ಸಭೆಯನ್ನು ಸಂಜಯಸಿ ಮುಖ್ಯಮಂತ್ರಿಗಳಿಗೆ ಬಜೆಟ್ ಮಂಡನೆ ಮಾಡಲು ಅವಕಾಶ ಮಾಡಿಕೊಟ್ಟರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


