ಪಾವಗಡ: ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವರ್ಗದವರು ಹಾಗೂ ಗೋರ್ಸೇದಾ ತಾಲ್ಲೂಕು ಘಟಕ ಮತ್ತು ತಾಲ್ಲೂಕಿನ ಬಂಜಾರ ಸಂಘಟನೆಗಳ ಒಕ್ಕೂಟದಿಂದ ದೈವಿ ಅವತಾರ ಪುರುಷ ಸಂತ ಸೇವಾಲಾಲ್ 284 ನೇ ಜಯಂತಿಯನ್ನು ಆಚರಿಸಲಾಯಿತು.
ಸಂತ ಸೇವಾಲಾಲ್ ಒರ್ವ ಪವಾಡ ಪುರುಷ ಬಂಜಾರ ಸಮಾಜದ ಕುಲ ದೈವರಾಗಿದ್ದಾರೆ. ಇವರು ಅನೇಕ ಚಮತ್ಕಾರ, ಪವಾಡಗಳ ಮೂಲಕನೇ ಜನರಲ್ಲಿ ಜಾಗೃತಿ ಮೂಡಿಸುವ ಅವತಾರಿ ಪುರುಷಯೆನಿಸಿಕೊಂಡಿದ್ದವರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಗೊಂಡನ ಕೊಪ್ಪ ಎಂಬಲ್ಲಿ ಭೀಮ ನಾಯಕ್, ಧರ್ಮಿಣಿ ಯಾಡಿ ಯವರ ಮಗನಾಗಿ 15 ಫೆಬ್ರವರಿ 1739ರಲ್ಲಿ ಜನಿಸಿದರು. ಇವರು ಜನನವಾದ ಸೂರಗೊಂಡನ ಕೊಪ್ಪವನ್ನು ಭಾಯಗಢ ಎಂದು ಕರೆಯಲಾಗುತ್ತದೆ.
ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದು ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಜ್ಯೋತಿ ಬೆಳಗಿಸಿದ ಶ್ರೇಷ್ಟ ಸಂತರೆನಿಸಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಲಂಬಾಣಿ ಸಮಾಜದ ಯುವ ಮುಖಂಡ ಕೃಷ್ಣನಾಯ್ಕ, ಶಕುಂತಲಬಾಯಿ, ತಾಲ್ಲೂಕಿನಲ್ಲಿ 30 ತಾಂಡಗಳಿವೆ ಸುಮಾರು 26 ಸಾವಿರ ಜನಸಂಖ್ಯೆಯಿದೆ. ಆದರೂ ನಿರ್ಲಕ್ಷ್ಯ ಕ್ಕೊಳಪಟ್ಟಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಸಮಾಜದ ಕಲ್ಯಾಣಕ್ಕಾಗಿ ಚಳ್ಳಕೆರೆ ಕ್ರಾಸ್ ನ್ನು ಸೇವಾಲಾಲ್ ವೃತ್ತ ಮಾಡಬೇಕು, ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಆರ್.ಐ.ರಾಜ್ ಗೋಪಾಲ್, ಸರ್ವೇ ಇಲಾಖೆ ಸೂಪರ್ ವೈಸರ್ ಜಿ.ಸಿ ಕೃಷ್ಣಪ್ಪ, ವಿ.ಎ.ರಾಜೇಶ್, ಲಂಬಾಣಿ ಸಮಾಜದ ಮುಖಂಡರಾದ ವಾಲ್ಯನಾಯ್ಕ,ಗೋವಿಂದನಾಯ್ಕ, ಉಮಾ ಶಂಕರ್ ,ಗುಂಡುರಾವ್ ನಾಯ್ಕ, ಗೋಪಿನಾಯ್ಕ, ಶಂಕರ್ ನಾಯ್ಕ, ಪೀರ್ಲ ನಾರಾಯಣ ನಾಯ್ಕ,ಶ್ರೀನಿವಾಸ್ ನಾಯ್ಕ,ಅಶೋಕ್ ನಾಯ್ಕ,ಶ್ರೀ ರಾಮ್ ನಾಯ್ಕ,ರಾಮನಾಯ್ಕ, ಆರ್.ಟಿ.ಖಾನ್ , ಬಾಲು ಸೇರಿದಂತೆ ಹಲವರು ಇದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy