ಬೆಂಗಳೂರು: ರಸ್ತೆ ಅಪಘಾತದಿಂದ ಕೋಮಾ ಸ್ಥಿತಿಯಲ್ಲಿರುವ ಅಪ್ಪಟ ಅಭಿಮಾನಿಯನ್ನು ಧ್ರುವ ಸರ್ಜಾ ನೋಡಲು ಆಗಮಿಸಿದ್ದಾರೆ. ಅಭಿಮಾನಿಯ ಮೆದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿಯಲ್ಲಿದ್ದು, ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಶಿಡ್ಲಘಟ್ಟದ ಪೃಥ್ವಿರಾಜ್ ನಾಲ್ಕು ದಿನಗಳ ಹಿಂದೆಯೇ ಬೈಕ್ ನಿಂದ ಬಿದ್ದಿದ್ದು, ಪರಿಣಾಮವಾಗಿ ತಲೆಗೆ ಗಂಭೀರವಾದ ಏಟು ಬಿದ್ದಿತ್ತು. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದು ಆತನ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿದೆ.
ಮಗನ ಕೊನೆಯಾಸೆ ಸರ್ಜಾರನ್ನು ನೋಡುವುದಾಗಿತ್ತು. ಧ್ರುವ ಸರ್ಜಾ ಅವರಿಗೆ ಈ ವಿಷಯ ತಿಳಿದು ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಭಿಮಾನಿಗಳನ್ನು ಭೇಟಿ ಮಾಡಲು ಧ್ರುವ ಆಸ್ಪತ್ರೆಗೆ ಆಗಮಿಸಿದ್ದರು. ಮಗನ ಚಿಕಿತ್ಸಾ ಖರ್ಚಿಗೆ ಸಾಲ ಮಾಡಿದ ಪೃಥ್ವಿ ತಂದೆ ಜಗದೀಶ್ ಅವರಿಗೆ ಧ್ರುವ 5 ಲಕ್ಷ ರೂಪಾಯಿ ಆಸ್ಪತ್ರೆ ನೀಡಲಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


