ಮುಂಬೈ: ಫ್ಲಿಪ್ ಕಾರ್ಟ್ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ವೋರ್ವ 40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ ಆರೋಪ ಕೇಳಿ ಬಂದಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿರಾಮ್ ಬಾಬುರಾವ್ ಮನ್ಸುಲೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಫೇಸ್ ಬುಕ್ ನಲ್ಲಿ ಉದ್ಯೋಗ ಅಥವಾ ನೇಮಕಾತಿ ಅವಕಾಶಗಳನ್ನು ನೋಡಿದ ನಂತರ ವಾಟ್ಸಾಪ್ ಗುಂಪುಗಳಿಗೆ ಸೇರ್ಪಡೆಗೊಂಡಿದ್ದು, ವಾಟ್ಸಾಪ್ ನಲ್ಲಿ ಮಹಿಳೆಯರ ಡಿಪಿ ನೋಡಿ ಅಶ್ಲೀಲ ವಿಡಿಯೋ ಕರೆಗನ್ನು ಮಾಡಿ ಕಿರುಕುಳ ನೀಡಿದ್ದ.
ಈ ಬಗ್ಗೆ ಮಲಾಡ್ ನಿವಾಸಿಯೊಬ್ಬರು ಕಳೆದ ವಾರ ಮಲಾಡ್ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಸದ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


