ರಿಲಯನ್ಸ್ ಇಂಡಸ್ಟ್ರೀಸ್ ಎಂಡಿ ಮುಖೇಶ್ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿ ಶಿವರಾತ್ರಿಯ ಸಂದರ್ಭದಲ್ಲಿ ಸೋಮನಾಥ ದೇವಾಲಯಕ್ಕೆ 1.51 ಕೋಟಿ ದೇಣಿಗೆ ನೀಡಿದ್ದಾರೆ.
ಇಬ್ಬರೂ ಇಂದು ಬೆಳಗ್ಗೆ ಗುಜರಾತ್‌ನ ಪ್ರಭಾಸ್ ಪಟಾನ್‌ನಲ್ಲಿರುವ ಸೋಮನಾಥ ದೇವಾಲಯವನ್ನು ತಲುಪಿದರು. ದೇವಸ್ಥಾನಕ್ಕೆ ಆಗಮಿಸಿದ ಅಂಬಾನಿಯವರನ್ನು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ಕೆ.ಲಹರಿ ಮತ್ತು ಕಾರ್ಯದರ್ಶಿ ಯೋಗೇಂದ್ರ ದೇಸಾಯಿ ಬರಮಾಡಿಕೊಂಡರು.
ದೇವಸ್ಥಾನಕ್ಕೆ ಆಗಮಿಸಿದ ಮುಖೇಶ್ ಅಂಬಾನಿ ಮತ್ತು ಅವರ ಪುತ್ರನನ್ನು ದೇವಾಲಯದ ಅರ್ಚಕರು ಸನ್ಮಾನಿಸಿ ಶ್ರೀಗಂಧ ಮತ್ತು ರೇಷ್ಮೆಯನ್ನು ಅರ್ಪಿಸಿದರು. ನಂತರ ದೇವಸ್ಥಾನದ ಅಧಿಕಾರಿಗಳಿಗೆ 1.51 ಕೋಟಿ ದೇಣಿಗೆ ಹಸ್ತಾಂತರಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


