ಮಾಜಿ ಶಾಸಕ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಫಿರೋಜ್ ಶೇಠ ಅವರು ತಮ್ಮ ರಾಜಕೀಯ ಹಾಗೂ 2023ರ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.ಸರ್ ನೀವು ಈ ಚುನಾವಣೆಯನ್ನು ಯಾವ ರೀತಿ ನೋಡುತ್ತೀರಿ?
ಇದೊಂದು ಬದಲಾವಣೆಯ ಸಮಯ ಇಲ್ಲಿ ಹಲವಾರು ರಾಜಕೀಯ ಬದಲಾವಣೆ ನಡೆಯುತ್ತಾ ಇದೆ ಈ ಕ್ಷೇತ್ರದಲ್ಲಿ ಜನ ಅದನ್ನು ಅನುಭವಿಸುತ್ತಿದ್ದಾರೆ.
ನಾನುಬೆಳಗಾವಿ ನಗರ ಮತ್ತು ಉತ್ತರ ಕ್ಷೇತ್ರಕೆ10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ .ಬಡಜನರ ಸೇವೆ ನನಗೆ ಆಶೀರ್ವಾದ ಇದೆ ನಾನು ಇನ್ನಷ್ಟು ಹೆಚ್ಚು ಬಡ ಜನರ ಸೇವೆ ಮಾಡಲು ಹೆಚ್ಚುಕನಾಗಿದ್ದೇನೆ.
ಸರ್ ಈ ಕ್ಷೇತ್ರ ಜಾತಿ ಧರ್ಮ ಆಧಾರಗಳ ಮೇಲೆ ವಿಭಾಗವಾಗಿದೆಯೆ?
ಹೌದು ಅನ್ನುವಕ್ಕಿಂತ ಇದರಲ್ಲಿ ಕೆಲವು ಬದಲಾವಣೆಗಳು ಆಗಿದೆ ಮಾತ್ರ ನಿಜ ,ನಾವು ಎಲ್ಲರೂ ಜೊತೆ ಸಮಬಾಳು ಸಮಭಾಗ ಸಮಪಾಲು ಮತ್ತು ಗೌರವದೊಂದಿಗೆ ಜೀವನ ನಡೆಸಬೇಕೆಂದು ನಮ್ಮೆಲ್ಲರ ಬಯಕೆಯಾಗಿದೆ ಇಲ್ಲಿ ಧರ್ಮ ಜಾತಿ ಮತ ಯಾವುದು ಲೆಕ್ಕಕ್ಕಿಲ್ಲ ನಾವು ಎಲ್ಲರೊಂದಿಗೆ ಇದ್ದೇನೆ ಆದ್ದರಿಂದ ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿರುವ ಪಕ್ಷಗಳ ಮೇಲೆ ಜನರ ವಿಶ್ವಾಸ ಕಳೆದು ಹೋಗಿದೆ ಈಗ ಸುಳ್ಳಿನ ಮತ್ತು ಭ್ರಮೆಯಲ್ಲಿ ಆಡಳಿತ ರೂಢ ಪಕ್ಷಗಳು ಬದುಕುತ್ತಾ ಇದೆ .
ಸರ್ ಬೆಳಗಾವಿ ರಾಜಕಾರಣದಲ್ಲಿ ಜಿದ್ದಾ ಜಿದ್ದಿನ ರಾಜಕಾರಣ ಇದೆ ನಾನು ನೀನು ಎಂಬ ವ್ಯಕ್ತಿಗತ ಪ್ರತಿಷ್ಠೆ ವಾಗಿದೆ ಅದರಲ್ಲಿ ಅನೇಕರು ಉತ್ತರ ಮತಕ್ಷೇತ್ರದ ಬಿ ಫಾರ್ಮ್ ಆಕಾಂಕ್ಷಿಗಳು ಇದ್ದಾರೆ ಇದನ್ನು ನೀವು ಯಾವ ರೀತಿ ನೋಡುತ್ತೀರಿ ?
ಪಕ್ಷ ಬಲಿಷ್ಟ ಹಾಗೂ ಒಗ್ಗಟ್ಟನಿಂದ ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದೇವೆ ನಾಯಕರುಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಇದು ನೂರು ವರ್ಷಗಳಿಗಿಂತ ಅಧಿಕವಾದ ಹಳೆಯ ರಾಷ್ಟ್ರೀಯ ಪಕ್ಷವಾಗಿದೆ ಇಲ್ಲಿ ಪ್ರಜಾಪ್ರಭುತ್ವ ಆಧಾರದ ಮೇಲೆ ಪ್ರತಿಯೊಬ್ಬರಿಗೂ ತಮ್ಮ ನೆಲವು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಇದನ್ನು ನಾನು ಹೃದಯಂತವಾಗಿ ಸ್ವಾಗತಿಸುತ್ತೇನೆ
ಸರ್ ಅಲ್ಪಸಂಖ್ಯಾತರು ಒಗ್ಗಟ್ಟಾಗಿದ್ದಾರೆಯೆ?
ಅಲ್ಪಸಂಖ್ಯಾತ ಎಂದರೆ ಬರಿ ನೀವು ಮುಸ್ಲಿಂ ಕಮ್ಯುನಿಟಿಯನ್ನು ಮಾತ್ರ ನೋಡಬೇಡಿ ಇಲ್ಲಿ ಜೈನ ಸಿಕ್ಕ ಕ್ರಿಶ್ಚನ್ ಮರಾಠ ಹಾಗೂ ಮಾರವಾಡಿ ಇವರು ಕೂಡ ಇದರಲ್ಲಿದ್ದಾರೆ ಅವರು ಕೂಡ ಅಲ್ಪಸಂಖ್ಯಾತರು ಇವರು ಕಾಂಗ್ರೆಸ್ ಪಕ್ಷದ ಯಾವಾಗಲೂ ಜೊತೆಯಲ್ಲಿದ್ದವರು ಆದ್ದರಿಂದ ಇಲ್ಲಿ ಯಾವುದೇ ರೀತಿಯ ಅಂತರ ಇಲ್ಲ.
ಸರ್ ನಿಮ್ಮ ಚುನಾವಣೆ ರಣನೀತಿ ಯಾವ ರೀತಿ ಇರಲಿದೆ?
ನಾನು ಮಾಡಿರುವಂತಹ 10 ವರ್ಷಗಳ ನಗರದ ಸೇವೆ ಹಾಗೂ ಅಭಿವೃದ್ಧಿ ನನ್ನ ರಣನೀತಿ ಯಾಗಲಿದೆ ಕಳೆದ ಬಾರಿ ನಾನು ಗೆದ್ದಿರುವ ಮತಗಳಿಗಿಂತ 20,000 ಮತಗಳನ್ನು ಹೆಚ್ಚಿಗೆ ಪಡೆದು ಸೋತಿದ್ದೇನೆ ಆದ್ದರಿಂದ ನನಗೆ ಸಂಪೂರ್ಣ ವಿಶ್ವಾಸವಿದೆ ಈ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸ ಮತ್ತು ಪ್ರೀತಿ ಇಟ್ಟಿದ್ದಾರೆ ಅದಕ್ಕಾಗಿ ನಾನು ಅವರ ಋಣಿಯಾಗಿ ಇರುವೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಫಿರೋಜ್ ಶೇಠ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


