ತುರುವೇಕೆರೆ: ತಾಲ್ಲೂಕಿನಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನವರನ್ನು ನೋಡಿ ಹೆಚ್ಚಿನ ಮತಗಳನ್ನು ವೀರಶೈವರು ನೀಡಿದ್ದಾರೆಯೇ ಹೊರತು ಶಾಸಕರ ಮುಖವನ್ನು ನೋಡಿ ಅಲ್ಲ ಎಂದು ಮಾಜಿ ಬಿ.ಜೆ.ಪಿ ಅಧ್ಯಕ್ಷ ಹೆಡಗೀಹಳ್ಳಿ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೆಲವರು ಹೇಳಿಕೆ ನೀಡಿ ಎಲ್ಲ ವೀರಶೈವರ ಬೆಂಬಲ ಬಿ.ಜೆ.ಪಿ. ಗೆ ಇದೆಯೆಂದು ತಿಳಿಸಿರುವುದು ಸತ್ಯಕ್ಕೆ ದೂರವಾದ ವಿಚಾರ. ಇವರುಗಳು ಸ್ವಾರ್ಥಕ್ಕಾಗಿ ಸಮಾಜವನ್ನು ಹಾಳುಮಾಡುವ ಹುನ್ನಾರವಾಗಿದ್ದು ವೀರಶೈವರು ಕೇವಲ ಒಂದೇ ಪಕ್ಷಕ್ಕೆ ಸೀಮಿತರಾದವರಲ್ಲ ಸಮಾಜದ ಹಲವಾರು ಮುಖಂಡರುಗಳು ಬಿ.ಜೆ.ಪಿ. ಪಕ್ಷದಲ್ಲಿ ಕಡೆಗಣಿಸಿದ್ದರಿಂದ ಬೇಸತ್ತು ಪಕ್ಷ ತೊರೆಯುವ ನಿರ್ದಾರ ಮಾಡಿದ್ದಾರೆ.
ಅದರಲ್ಲಿ ನಾನೂ ಒಬ್ಬ ಈಗಾಗಿ ನಾನು ಜೆ.ಡಿ.ಎಸ್. ಸೇರಿದ್ದೇನೆ ಇನ್ನು ಹಲಾವಾರು ಮುಖಂಡರುಗಳು ನಮ್ಮನ್ನು ಹಿಂಬಾಲಿಸಲಿದ್ದಾರೆ ಇದಕ್ಕೆ ಇಲ್ಲಿ ಸೇರಿರುವ ಸಮಾಜದ ನೂರಾರು ಮುಖಂಡರೇ ಸಾಕ್ಷಿ ಎಂದು ಹೇಳಿದರು.
ನಾನು ಯಾವುದೇ ಕಾರಣಕ್ಕೂ ಆಸೆ ಆಮಿಷಕ್ಕೆ ಒಳಗಾಗಿ ಪಕ್ಷವನ್ನು ತೊರೆದಿಲ್ಲ, ಅಲ್ಲಿ ಕಾರ್ಯಕರ್ತರಿಗೆ ಆದಂತಹ ಅನ್ಯಾಯವನ್ನು ಖಂಡಿಸಿ ಪಕ್ಷದಿಂದ ಹೊರಬಂದಿದ್ದೇನೆ ಹೊರತು, ಇನ್ನಾವುದೇ ಕಾರಣದಿಂದಲ್ಲ. ಇಲ್ಲಿಯವರೆಗೂ ವೀರಶೈವ ಸಮಾಜದ ಯಾರೊಬ್ಬರನ್ನೂ ಎರಡನೇ ಸಾಲಿನ ನಾಯಕರನ್ನಾಗಿ ಬೆಳೆಸಲಿಲ್ಲ. ಇದು ಸಮಾಜಕ್ಕೆ ಮಾಡಿದಂತಹ ಅನ್ಯಾಯ ಅದಲ್ಲದೆ ಸಮಾಜಕ್ಕೆ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿ ಸಮಾಜದ ಬಂಧುಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ, ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ವೀರಶೈವರು ಇರುವ ಊರುಗಳಲ್ಲಿ ಜೆ.ಡಿ.ಎಸ್. ಗೆ ಹೆಚ್ಚಿನ ಮತಗಳು ಬರುವುದರಲ್ಲಿ ಸಂಶಯವಿಲ್ಲ ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಅಧಿಕಾರಕ್ಕೆ ತಂದ ಯಡಿಯೂರಪ್ಪನವರನ್ನು ಮತ್ತು ವಿಜಯೇಂದ್ರರವರನ್ನು ಬಿ.ಜೆ.ಪಿ.ಯಲ್ಲಿ ಕಡೆಗಣಿಸುತ್ತಿರುವುದರಿಂದ ಪಕ್ಷದ ಮುಖಂಡರುಗಳ ದೋರಣೆಯನ್ನು ಖಂಡಿಸಿ ಸಮಾಜದ ಹಲವಾರು ಮುಖಂಡರುಗಳು ಪಕ್ಷ ತೊರೆಯುವ ನಿರ್ದಾರಕ್ಕೆ ಬಂದಿದ್ದಾರೆ ಎಂದರು.
ಜೆ.ಡಿ.ಎಸ್ ಮುಖಂಡರಾದ ಸೋಮಣ್ಣ ಮಾತನಾಡಿ, ನಮ್ಮ ಸಮಾಜದ ಮುಖಂಡರುಗಳು ಕೃಷ್ಣಪ್ಪನವರ ಆಡಳಿತ ವೈಖರಿಯನ್ನು ಮೆಚ್ಚಿ ಪಕ್ಷ ವನ್ನು ಸೇರುತ್ತಿದ್ದಾರೆ ಬಿ.ಜೆ.ಪಿ. ಯವರು ನಮಗೆ ವೀರಶೈವರ 80% ಮತಗಳು ಬರುತ್ತವೆಂದು ಹೇಳಿಕೊಳ್ಳುತ್ತಿದ್ದಾರೆ. ಸುಳ್ಳು ಒಂದು ರೀತಿಯ ಭಯ ಅವರನ್ನು ಕಾಡುತ್ತಿದೆ ನಮ್ಮ ಸಮಾಜ ಭಾಂದವರು ಜೆ.ಡಿ.ಎಸ್ ಗೆ ಹೆಚ್ಚಿನ ಮತಗಳನ್ನು ಈ ಬಾರಿ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಸದಸ್ಯರಾದ ಲೋಕೇಶ್. ರೇಣುಕಪ್ಪ. ವೆಂಕಟಾಪುರ ಯೋಗೀಶ್. ಗ್ರಾ. ಪಂ. ಸದಸ್ಯ ಚನ್ನಬಸವೇಗೌಡ ಸೇರಿದಂತೆ ಹಲವಾರು ವೀರಶೈವ ಸಮಾಜದ ಮುಖಂಡರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy