ನಕಲಿ ಪ್ರಮಾಣಪತ್ರಗಳನ್ನು ತೋರಿಸಿ ಲೈಂಗಿಕ ಉದ್ದೀಪನ ಮದ್ದುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಎಸ್‌ಟಿಎಫ್ ತಂಡ ಬಂಧಿಸಿದೆ. ಉತ್ತರ ಪ್ರದೇಶದ ಪ್ಯಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೊರಾದಾಬಾದ್‌ನ ಧರ್ಮ ಸಿಂಗ್, ಧ್ಯಾನ್ ಸಿಂಗ್, ವೀರ್ ಸಿಂಗ್ ಮತ್ತು ಸಂಭಾಲ್‌ನ ಲಾಲ್ ಸಿಂಗ್ ಅಲಿಯಾಸ್ ಗುಲಾಬ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಪೊಲೀಸರು ಅವರಿಂದ ನಾಲ್ಕು ಮೊಬೈಲ್ ಫೋನ್, ನಗದು ಪುಸ್ತಕ, ಎರಡು ನಕಲಿ ಪ್ರಮಾಣಪತ್ರಗಳು, ಆಯುರ್ವೇದ ಮಾತ್ರೆ ತುಂಬಿದ 22 ಸಣ್ಣ ಬಾಟಲಿಗಳು ಮತ್ತು 2,640 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಕಾಮೋತ್ತೇಜಕ ಔಷಧಗಳನ್ನು ಮಾರಾಟ ಮಾಡುವ ಹೆಚ್ಚಿನ ಗ್ಯಾಂಗ್‌ಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಎಸ್‌ಟಿಎಫ್ ಹೆಚ್ಚುವರಿ ಎಸ್‌ಪಿ ವಿಶಾಲ್ ವಿಕ್ರಮ್ ಹೇಳಿದ್ದಾರೆ.
ಅಕ್ರಮ ಲೈಂಗಿಕ ಉತ್ತೇಜಕಗಳನ್ನು ಮಾರಾಟ ಮಾಡುವ ಗ್ಯಾಂಗ್ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಸಿಕ್ಕಿದೆ. “ನಾವು ಅವರನ್ನು ಬಲೆಯ ಮೂಲಕ ಹಿಡಿದೆವು. ಅಪರಾಧಿಗಳು ಸೈಬರ್ ಕೆಫೆಯ ಮಾಲೀಕರಿಗೆ 750 ರೂಪಾಯಿ ನೀಡಿ ಲೈಂಗಿಕ ಉದ್ದೀಪನ ಮದ್ದುಗಳನ್ನು ಮಾರಾಟ ಮಾಡಲು ನಕಲಿ ಪ್ರಮಾಣಪತ್ರ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರು ಜನರಿಗೆ ನಕಲಿ ಔಷಧಿಗಳನ್ನು ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಎಂದು ತನಿಖಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


