ತುಮಕೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ, ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂ.ಎಲ್ಎ ಎಂಬಂತಹ ಪೋಸ್ಟರ್ ವಾರ್ ಶುರುವಾಗಿದೆ.
ಇನ್ನು ರಾತ್ರೋರಾತ್ರಿ ನಗರದ ಹಲವೆಡೆ ಶಾಸಕರ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿರುವ ಕಾರ್ಯಕರ್ತರು. ‘PayMLA ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ, ಭ್ರಷ್ಟಾಚಾರವೇ ನನ್ನ ಮೊದಲ ಆಧ್ಯತೆ’ ಎಂದು ಬರೆದಿರುವ ಪೋಸ್ಟರ್ ಅಂಟಿಸಲಾಗಿದೆ.
ಈ ಹಿಂದೆ ಪ್ರತಿಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ, ಭ್ರಷ್ಟ ಸರ್ಕಾರ ಎಂಬಿತ್ಯಾದಿ ಟೀಕೆಗಳನ್ನು ಮಾಡುವುದರ ಜೊತೆಗೆ ಪೇ ಸಿಎಂ ಎಂಬ ಅಭಿಯಾನವನ್ನು ಆರಂಭಿಸಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


