“ತಮ್ಮ ಸಾಮರ್ಥ್ಯ ಮೀರಿ ದುಡಿಯುವ ಜೀವಿಗಳ ಸಾಲಿನಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿರುತ್ತಾರೆ. ಚಾಲಕರ ಈ ಜನಪರ ಸೇವೆಗೆ ಹೃದಯಸ್ಪರ್ಶಿ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶ್ರೀ ಹಿಂಡಲಗಾ ಗಣಪತಿ ಆಟೋ ಸ್ಟ್ಯಾಂಡ್ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಹಗಲಿರುಳು ಶ್ರಮಿಸುವ ಆಟೋ ಚಾಲಕರ ಸೇವೆ ನಿಜಕ್ಕೂ ಅದ್ಭುತ. ಆಟೋ ಚಾಲಕರ ಹಿತರಕ್ಷಣೆಗೆ ನನ್ನಿಂದಾದ ನೆರವು ನೀಡಲು ಸದಾ ಬದ್ಧವಾಗಿದ್ದೇನೆ” ಎಂದು ಅವರು ಹೇಳಿದರು. ಈ ಸಮಯದಲ್ಲಿ ಸ್ಥಳೀಯ ಆಟೋ ಚಾಲಕರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


