ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಾತ್ರೆ ಇಂದು ಬೆಳಗಾವಿ ಖಾನಾಪುರ ತಾಲೂಕಿನ ಪ್ರವೇಶ ಮಾಡಿದ ಖಾನಾಪುರ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಇದೇ ಸಂದರ್ಭದಲ್ಲಿ ಖಾನಾಪುರ್ ಬಸವೇಶ್ವರ ವೃತ್ತದಲೇ ಬಸವಣ್ಣನವರ ಮೂರ್ತಿಗೆ ಒಂದಿಸಿ ಡಾ. ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ನಮನ ಸಲ್ಲಿಸಿ ಯಾತ್ರೆಯನ್ನು ಪ್ರಾರಂಭ ಮಾಡಿದರು.
ಇದೇ ಮಾರ್ಗವಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಜನ ಸಂಕಲ್ಪ ಯಾತ್ರೆ ಸಾಗಿದ್ರೂ ಕೂಡ ಮಹಾಪುರುಷರ ಗಳಿಗೆ ಹಾಗೂ ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಗಲಿ, ಛತ್ರಪತಿ ಶಿವಾಜಿ ಮಹಾರಾಜರ ಅವರನ್ನು ಸ್ಮರಣೆ ಹಾಗೂ ವಂದಿಸದೆ ಅವರ ಎಷ್ಟರ ಮಟ್ಟಿಗೆ ದೇಶ ಪ್ರೇಮ ಇದೆ ಎನ್ನುವುದು ಅಲ್ಲಿಗಿದ್ದ ಜನರು ಮಾತನಾಡುತ್ತಿದ್ದರು.
ಖಾನಾಪುರ ಮಾರ್ಗವಾಗಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಧಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಸಮಾಧಿ ದರ್ಶನ ಪಡೆದರು. ಈ ಸಂದರ್ಭದಲ್ಲಿಕಾಂಗ್ರೆಸ್ ನ ಮುಖಂಡರುಗಳಾದ ಹಾಗೂ ಕೆ ಪಿ ಸಿ ಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ .ಶಾಸಕ ಜಮೀರ್ ಅಹಮದ್ ವಿಧಾನ ಪರಿಷತ್ ಸದಸ್ಯರಾಗಳಾದ ರಾಥೋಡ್ ಮಾಜಿ ಶಾಸಕರುಗಳಾದ ಕೋನ್ ರೆಡ್ಡಿ ,ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷೆ ವಿನಯ್ ನವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಂಗಳೆ ಹಾಗೂ ಅನೇಕ ಕಾಂಗ್ರೆಸ್ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


