ಹೆಚ್.ಡಿ ಕುಮಾರಸ್ವಾಮಿ ಗೆ ಅಧಿಕಾರ ಕೊಟ್ಟಾಗ ಸರಿಯಾಗಿ ಆಡಳಿತ ನಡೆಸದೇ ಬಿಟ್ಟು ಹೋದ್ರು. ಹೆಚ್.ಡಿ .ಕೆ ಕುದುರೇ ಏರದೇ ಬಿಟ್ಟು ಹೋಗಿದ್ದಾರೆ. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದರೇ ಜನರು ನಂಬಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಈ ರಾಜ್ಯದಲ್ಲಿ ಮತದಾರನೇ ದೊಡ್ಡವನು. ಇಲ್ಲಿ ಯಾರ ಪಾಳೇಗಾರಿಕೆ ನಡೆಯಲ್ಲ. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಹೆಚ್.ಡಿ ಕುಮಾರಸ್ವಾಮಿಯನ್ನ ಜನರು ನಂಬಲ್ಲ. ಕಾಂಗ್ರೆಸ್ ಜೆಡಿಎಸ್ ನವರದ್ದು ಯಾವಾಗಲೂ ಕಳ್ಳರ ಆಟ ಬಿಟಿಮ್ ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್ ಎಂದು ಟೀಕಿಸಿದರು.
ಡಿ.ಕೆ ಶಿವಕುಮಾರ್ ಗೆ ಸೋಲುವ ಭಯ ಕಾಡುತ್ತಿದೆ. ಸಿದ್ದರಾಮಯ್ಯ ಓಡಿ ಹೋಗುವ ಹಂತದಲ್ಲಿದ್ದಾರೆ ಎಸಿಬಿ ರಚಿಸಿ ಎಲ್ಲಾ ಕೇಸ್ ಮುಚ್ಚಿ ಹಾಕಿದರು ಕಾಂಗ್ರೆಸ್ ಅವಧಿಯಲ್ಲಿ ಒಂದು ಕೇಸ್ ನಲ್ಲಿ ಬಂದನವಾಗಿಲ್ಲ ನಾವು ಪಾರದರ್ಶಕವಾಗಿದ್ದೇವೆ. ಬಿಜೆಪಿಗರೇ ತಪ್ಪು ಮಾಡಿದ್ರೆ ಜೈಲಿಗೆ ಹಾಕ್ತೇವೆ. ಶಿಕ್ಷೆ ಕೊಡುತ್ತೇವೆ ಎಂದು ಆರ್.ಅಶೋಕ್ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


