ಕೊರಟಗೆರೆ : ಮಾಜಿ ಸಿಎಂ ಯಡಿಯೂರಪ್ಪನವರ ಅಭಿಮಾನಿಯಾದ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಮುನಿಯಪ್ಪನವರು ಬಿಎಸ್ ವೈ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವುದರ ಮೂಲಕ ನೂರಾರು ಬಡ ನಿರುದ್ಯೋಗಿ ಯುವಜನತೆಗೆ ಉದ್ಯೋಗಾವಕಾಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಕ್ಷೇತ್ರದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಿ ಕೆಲಸ ಕೊಡಿಸುವುದರ ಮೂಲಕ ಯುವಜನತೆಯ ಬಾಳಿಗೆ ಬೆಳಕು ನೀಡಿದ್ದಾರೆ.
ಕ್ಷೇತ್ರದ ಯುವ ಜನತೆಯ ಉತ್ತಮ ಭವಿಷ್ಯ ನಿರ್ಮಾಣದ ಕನಸ್ಸನ್ನು ಹೊತ್ತಿರುವ ಮುನಿಯಪ್ಪ ಹಾಗೂ ಬಿಜೆಪಿ ಯುವ ಮುಖಂಡ ಚೇತನ್ ಮುನಿಯಪ್ಪನವರು ಈಗಾಗಲೇ ಕ್ಷೇತ್ರದ ಬಡ ವರ್ಗದ ಜನರಿಗೆ ಸಾಕಷ್ಟು ರೀತಿಯ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಮುನಿಯಪ್ಪನವರು ಈಗಾಗಲೇ ಕೊರಟಗೆರೆ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನರ ಕಷ್ಟ ಸುಖದಲ್ಲಿ ಭಾಗವಹಿಸಿ ಜನರ ವಿಶ್ವಾಸ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದ್ದು, ಕ್ಷೇತ್ರದ ಜನರ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುನಿಯಪ್ಪನವರ ಅಭಿಮಾನಿಗಳ ಆಶಯ ಆಗಿದೆ.
ಮುನಿಯಪ್ಪನವರಿಗೆ ಕೊರಟಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದ್ದೇ ಆದಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಕ್ಷೇತ್ರದ ಜನರ ಪ್ರೀತಿ ಹಾಗೂ ವಿಶ್ವಾಸ ಪಡೆದಿರುವ ಮುನಿಯಪ್ಪನವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ.

ನಾನು ಕೊರಟಗೆರೆ ಕ್ಷೇತ್ರದಲ್ಲಿ ನಾಲ್ಕೂ ವರ್ಷಗಳಿಂದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪ್ರತಿ ಮನೆಯ ಸದಸ್ಯರ ಕಷ್ಟಗಳನ್ನ ಮನೆ ಮಗನಂತೆ ಆಲಿಸಿದ್ದೇನೆ. ಹಬ್ಬಹರಿದಿನಗಳು ಬಂದಾಗ ನನ್ನ ಮನೆಯ ಅಕ್ಕತಂಗಿಯರಿಗೆ ಉಡುಗೊರೆ ಕೊಡುವ ಹಾಗೆ ಗ್ರಾಮದ ಹೆಣ್ಣು ಮಕ್ಕಳಿಗೆ ಬಾಗಿನ ಕೊಟ್ಟಿದ್ದೇನೆ. ಕೊರೋನಾ ಸಂದರ್ಭದಲ್ಲಿ ಕ್ಷೇತ್ರದ ಕಟ್ಟಕಡೆಯ ಗ್ರಾಮದವರೆಗೆ ದಿನಸಿ ಪದಾರ್ಥಗಳನ್ನು ತಲುಪಿಸಿದ್ದೇನೆ. ಕ್ಷೇತ್ರದಲ್ಲಿ ಉಳಿದು ಜನರ ಸಮಸ್ಯೆಗಳನ್ನು ಆಲಿಸುತ್ತಾ ಎಲ್ಲರ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾ ಇದೀಗ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ತಂದೆ ತಾಯಂದಿರು ಕಷ್ಟಪಟ್ಟು ಓದಿಸಿ ದೊಡ್ಡವರನ್ನಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳು ಮನೆಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಏನಾದರೂ ಮಾಡಿ ಕೆಲಸ ಕೊಡಿಸಬೇಕು ಎನ್ನುವ ಒಂದು ಆಶಯದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದೇನೆ. ಈ ಉದ್ಯೋಗ ಮೇಳದಲ್ಲಿ ನಮ್ಮ ಕ್ಷೇತ್ರದವರಲ್ಲದೆ ಜಿಲ್ಲೆಯ ನಾನಾ ಭಾಗದಿಂದ ಹತ್ತು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಕ ಯುವತಿಯರು ಪಾಲ್ಗೊಂಡು ಸುಮಾರು ೬೦ ಕಂಪನಿಗಳಲ್ಲಿ ಕೆಲಸ ಸಿಕ್ಕಿದೆ. ಇದೀಗ ಆ ಬಡ ತಂದೆ ತಾಯಿಗಳಿಗೆ ಮಕ್ಕಳು ಆಸರೆಯಾಗಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಇದಿಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಭಂದಿಸಿದಂತೆ, ವಿದ್ಯಾಭ್ಯಾಸಕ್ಕೆ ಸಂಭಂದಿಸಿದಂತೆ ನನ್ನಿಂದಾಗುವ ಎಲ್ಲ ಸೌಕರ್ಯಗಳನ್ನು ನನ್ನ ಕ್ಷೇತ್ರದ ಜನತೆಗೆ ಒದಗಿಸಿಕೊಡುವುದೇ ನನ್ನ ಮೂಲ ಉದ್ದೇಶ.
–ಕೆ.ಎಂ.ಮುನಿಯಪ್ಪ, ಬಿಜೆಪಿ ಟಿಕೆಟ್ ಆಕಾಂಕ್ಷಿ
ನಮ್ಮ ತಂದೆ ಕೊರಟಗೆರೆ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ. ಅವರು ನಾಲ್ಕು ವರ್ಷದಿಂದ ಬಡಜನರ ಕೆಲಸಗಳನ್ನ ಮಾಡುತ್ತಾ ಬಂದಿರುವುದನ್ನ ನಾನು ಗಮನಿಸುತ್ತಾ ಬಂದಿದ್ದೇನೆ. ಅವರು ಗೆಲ್ಲುವು ಹಾಗೂ ಸೋಲು ಜನ ನಿರ್ಧಾರ. ಅವರು ಗೆದ್ದರು ಸರಿ ಸೋತರು ಸರಿ. ಕೊರಟಗೆರೆ ಕ್ಷೇತ್ರದ ಜನರ ಕೆಲಸವನ್ನ ಮಾಡುತ್ತಲೇ ಇರುತ್ತಾರೆ. ನಮ್ಮ ತಂದೆ ರಾಜಕಾರಣಿ ಆಗಲು ರಾಜಕೀಯಕ್ಕೆ ಬರುತ್ತಿಲ್ಲ. ಗೆದ್ದರೆ ಸರ್ಕಾರದಿಂದ ಬರುವ ಅನೇಕ ಅನುದಾನಗಳನ್ನ ಬಡ ಜನರಿಗೆ, ಸರ್ಕಾರಿ ಶಾಲೆಗಳಿಗೆ, ಬಡ ವಿದ್ಯಾರ್ಥಿಗಳಿಗೆ, ಬಡವರ ಮನೆ ಮಗನಾಗಿ ಕೆಲಸ ಮಾಡಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಕೆಲಸಗಳನ್ನು ಕ್ಷೇತ್ರದ ಜನರು ಈಗಾಗಲೇ ನೋಡಿದ್ದಾರೆ. ಅವರನ್ನ ಗೆಲ್ಲಿಸುತ್ತಾರೆ ಎನ್ನುವ ಭರವಸೆ ನನಗಿದೆ.
–ಚೇತನ್ ಮುನಿಯಪ್ಪ, ಬಿಜೆಪಿ ಯುವ ಮುಖಂಡ.

ಕೆ. ಎಂ ಮುನಿಯಪ್ಪನವರು ಹಾಗೂ ಅವರ ಮಗ ಚೇತನ್ ಮುನಿಯಪ್ಪನವರನ್ನ ಬಹಳ ಹತ್ತಿರದಿಂದ ನಾನು ನೋಡಿದ್ದೇನೆ. ಅವರು ಕೊರಟಗೆರೆ ಕ್ಷೇತ್ರದ ಬಡ ಜನರ ಪರವಾಗಿ ನಿಂತಿದ್ದಾರೆ. ಖಂಡಿತವಾಗಿಯೂ ಅವರು ಗೆಲ್ಲುತ್ತಾರೆ. ಈ ಕ್ಷೇತ್ರದ ಬಡ ಜನರ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದಾರೆ. ಮುಂದೆಯೂ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ.
–ಪ್ರೇಮ, ಚಲನಚಿತ್ರ ನಟಿ..
ನಾವು ಬಹಳ ಓದಿದ್ದೇವೆ ಎಂದು ಮನೆಯಲ್ಲಿ ಕೂರುವುದು ತಪುö್ಪ. ಅವಕಾಶ ಸಿಗುವವರೆಗೂ ಯಾವುದಾದರೂ ಕೆಲಸಗಳನ್ನು ಮಾಡುತ್ತಾ ನಿಮ್ಮನ್ನು ಹೆತ್ತ ತಂದೆ ತಾಯಿಗಳ ಆಶಯದಂತೆ ಅವರ ಕಷ್ಟಕ್ಕೆ ನೀವು ಆಗುವುದು ನಿಮ್ಮಗಳ ಕರ್ತವ್ಯ. ನಿಮ್ಮನ್ನು ಓದಿಸುವುದಕ್ಕೆ ನಿಮ್ಮ ಹೆತ್ತ ತಂದೆ ತಾಯಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದ್ದರಿಂದ ಯಾವುದೇ ಯುವಕ ಯುವತಿಯರಾಗಲಿ ವಿದ್ಯಾರ್ಥಿಗಳಾಗಲಿ ತಮ್ಮ ಓದು ಮುಗಿದ ನಂತರ ತಮ್ಮ ಓದಿಗೆ ತಕ್ಕ ಕೆಲಸ ಸಿಗುವವರೆಗೂ ಚಿಕ್ಕ ಕೆಲಸಗಳನ್ನು ಮಾಡುವುದು ಜಾಣತನ. ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಗೋರ್ಮೆಂಟ್ ಕೆಲಸ ಸಿಗುವುದಿಲ್ಲ. ಲಕ್ಷ ಲಕ್ಷ ಸಂಪಾದನೆಯು ಸಿಗುವುದಿಲ್ಲ. ಚಿಕ್ಕ ಕೆಲಸಗಳನ್ನು ಮಾಡುತ್ತಾ ನಾವು ಉನ್ನತ ಮಟ್ಟಕ್ಕೆ ಏರಬೇಕು. ನಮ್ಮನ್ನು ಸಾಕಿ ಬೆಳೆಸಿ ವಿದ್ಯಾಭ್ಯಾಸ ಕೊಟ್ಟ ತಂದೆ ತಾಯಿಗಳ ಕಣ್ಣಲ್ಲಿ ನೀರು ಬಾರದಂತೆ ಸುಖದಿಂದ ನೋಡಿಕೊಳ್ಳಬೇಕು. ಇದು ನಿಜವಾಗಿಯೂ ಹೆತ್ತ ತಂದೆ ತಾಯಿಗಳಿಗೆ ಮಕ್ಕಳು ಮೊದಲು ಮಾಡಬೇಕಾದ ಕೆಲಸ. ಆದ್ದರಿಂದ ಇಂದು ಬಹಳಷ್ಟು ಯುವಕ ಯುವತಿಯರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದೀರಾ. ಮುನಿಯಪ್ಪನವರ ಆಶಯದಂತೆ ತಮ್ಮೆಲ್ಲರಿಗೂ ಕೆಲಸ ಸಿಕ್ಕಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ.
–ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ.

ವೈಟ್ ಕಲರ್ ರಾಜಕಾರಣ ಮಾಡಲು ನಮಗೆ ಬರುವುದಿಲ್ಲ. ನಾವು ಅಕ್ಕಿ ಕೊಡಿ ಎಂದು ನಾವ್ಯಾರಿಗೂ ಕೇಳಿಲ್ಲ. ನಿರುದ್ಯೋಗದ ನಿವಾರಣೆಯೇ ನಮ್ಮ ಮೊದಲ ಗುರಿ. ನಮ್ಮ ಬಿಜೆಪಿ ಪಕ್ಷದ ಸಿದ್ಧಾಂತವೆ ಸರ್ವ ಜನಾಂಗದ ಶಾಂತಿಯ ತೋಟ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಬೇಕು. ನಾನು ಪ್ರತಿನಿತ್ಯ ನೋಡುತ್ತಿದ್ದೇನೆ ಕೊರಟಗೆರೆ ಕ್ಷೇತ್ರದಿಂದ ನೆಲಮಂಗಲ ಬೆಂಗಳೂರಿನವರೆಗೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕೆಲಸಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ೭:೦೦ಗೆ ಗಾರ್ಮೆಂಟ್ಸ್ ಗಳಿಗೆ ಹೋಗುತ್ತಾರೆ. ಸಂಜೆಯ ತನಕ ಕೆಲಸ ಮಾಡಿ ಅಲ್ಲಿಂದ ಬರುವ ಒಳಗಾಗಿ ಕತ್ತಲಾಗಿರುತ್ತದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಸಿಗಬೇಕು. ಇಂತಹ ಕೆಲಸಗಳನ್ನು ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರು ಮಾಡುತ್ತಿದ್ದಾರೆ. ಇಂತಹ ಕೆಲಸಗಳನ್ನು ಮಾಡುವುದನ್ನು ಬಿಟ್ಟು ದೊಡ್ಡ ದೊಡ್ಡ ಸ್ಟೇಜ್ ಗಳನ್ನು ಹಾಕಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ. ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ಮರೀಚಿಕೆಯಾಗಿವೆ. ಇಷ್ಟು ವರ್ಷಗಳು ಬೇಕಿತ್ತಾ ಅಭಿವೃದ್ಧಿ ಕೆಲಸ ಮಾಡಲು. ಇದೀಗ ನಾವು ಮಾಡುತ್ತಿದ್ದೇವೆ ಎಂದು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಕೊರಟಗೆರೆ ಕ್ಷೇತ್ರದ ಜನ ಇವರ ಅಭಿವೃದ್ಧಿ ಕೆಲಸಗಳನ್ನು ನೋಡುತ್ತಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವ ಮುಖಾಂತರ ಕೊರಟಗೆರೆ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ.
— ಆರತಿ, ಎಸ್ಸಿ ಮೋರ್ಚಾ ಉಪಾಧ್ಯಕ್ಷೆ, ಬೆಂಗಳೂರು
ಉದ್ಯೋಗ ಮೇಳದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಕೆ.ಎಂ.ಮುನಿಯಪ್ಪ, ಜಗದ್ಗುರು ಡಾ.ಶಾಂತವೀರ ಸ್ವಾಮೀಜಿ, ಕುಂಚಿಟಗರ ಮಠ ಚಿತ್ರದುರ್ಗ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬೋವಿಮಠ ಚಿತ್ರದುರ್ಗ, ಪರಮಪೂಜ್ಯ ಶ್ರೀ ಮಹಾಲಿಂಗ ಸ್ವಾಮೀಜಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸಂಸ್ಥಾನ ಮಠ ತಂಗನಹಳ್ಳಿ, ಜಗದ್ಗುರು ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಹಡಪದ ಗುರುಪೀಠ ವಿಜಯಪುರ, ಶ್ರೀ ಮುರುಗೇಂದ್ರ ಸ್ವಾಮೀಜಿ ಯೋಗವನ ಬೆಟ್ಟ ಚಿತ್ರದುರ್ಗ, ನಾಗೇಂದ್ರ ಸ್ವಾಮೀಜಿ ಹನುಮಂತಪುರ ಹಾಗೂ ರಾಷ್ಟ್ರೀಯ ಬಿಜೆಪಿ ಮೋರ್ಚಾದ ಸದಸ್ಯರಾದ ಡಾ.ವಿನೋದ್ ವತ್ಸವ್, ಆಂಧ್ರಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ನಾಯ್ಡು, ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಲಹರಿವೇಲು, ಬೋವಿ ಸಂಘದ ರಾಜ್ಯ ಅಧ್ಯಕ್ಷರಾದ ಡಾ.ಚಿನ್ನಸ್ವಾಮಿ, ಸೇಲ್ಸ್ ಫೌಂಡೇಶನ್ ಅಧ್ಯಕ್ಷ ರಾಜೇಶ್ ಬಾಬು,ಡಾಕ್ಟರ್ ಹೇಮಂತ್,ಮಾಜಿ ಅಧ್ಯಕ್ಷ ಓಂಕಾರ್,ತಾಲೂಕು ಮೋರ್ಚಾ ಅಧ್ಯಕ್ಷ ಪವನ್ ಕುಮಾರ್, ತಾಲ್ಲೂಕು ಮುಖಂಡರಾದ ಗುರುದತ್, ಗೋವಿಂದರೆಡ್ಡಿ,ಮಂಜುನಾಥ್, ಆನಂದ್, ವಿನೋದ್ ಶ್ರೀವಾಸ್ತವ್, ಸೇರಿದಂತೆ ತಾಲ್ಲೂಕು ಮಂಡಲ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಮುನಿಯಪ್ಪ ಅಭಿಮಾನಿ ಬಳಗದವರು ಉಪಸ್ಥಿತರಿದ್ದು ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


