ತುರುವೇಕೆರೆ: ಪಟ್ಟಣದಲ್ಲಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯತಿಯ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಬೃಹತ್ ಕಟ್ಟಡವನ್ನು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಎಂ ಟಿ ಬಿ ನಾಗರಾಜ್ ರವರು ಉದ್ಘಾಟಿಸಬೇಕಾಗಿದ್ದು ಅವರ ಅನುಪಸ್ಥಿತಿಯಲ್ಲಿ ತಾಲೂಕಿನ ಶಾಸಕರಾದ ಮಸಾಲ ಜಯರಾಮ್ ರವರು ನಾಮಫಲಕ ಅನಾವರಣಗೊಳಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಇದೊಂದು ಐತಿಹಾಸಿಕ ದಿನವಾಗಿದ್ದು, ಈ ಕಟ್ಟಡದ ಕಾಮಗಾರಿ ಶುರುವಾಗಿದ್ದು 2007ರಲ್ಲಿ ಇಂದಿಗೆ 17 ವರ್ಷಗಳೆ ಕಳೆದಿವೆ 14 ವರ್ಷ ಅಧಿಕಾರ ನಡೆಸಿದವರು ಕೇವಲ ತಗಡಿನ ಶೀಟ್ ಮುಚ್ಚಿ ಅನೈತಿಕ ಚಟುವಟಿಕೆ ತಾಣವಾಗಲು ಕಾರಣಕರ್ತರಾಗಿದ್ದರು ನಾನು ಶಾಸಕನಾಗಿ ಅಧಿಕಾರವಹಿಸಿಕೊಂಡ ಗಳಿಗೆಯಲ್ಲಿಯೇ ವಾಣಿಜ್ಯ ಸಂಕೀರ್ಣಕ್ಕೆ ಮುಕ್ತಿ ಕೊಡಿಸಬೇಕು ಎಂದು ಪಣತೊಟ್ಟು ಹದಿನೈದು ವರ್ಷಗಳಿಂದ ಆಗದೆ ಇರುವ ಕೆಲಸವನ್ನು ಕೇವಲ ಮೂರು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ತಂದು ಈ ವಾಣಿಜ್ಯ ಸಂಕೀರ್ಣವನ್ನು ಐತಿಹಾಸಿಕವಾಗಿ ನಿರ್ಮಿಸಿದ್ದೇವೆ. ಇದಕ್ಕೆ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ನನಗೆ ಬೆಂಬಲವಾಗಿ ನಿಂತಿದ್ದು ಅವರಿಗೆ ನಾನು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ದಿನವೇ ಪಟ್ಟಣದ ಆರಾಧ್ಯ ದೈವ ಬೇಟೆರಾಯಸ್ವಾಮಿ ರಥೋತ್ಸವ ಇದ್ದು ಈ ಕಾರ್ಯಕ್ರಮದ ಮೂಲಕ ಬೇಟರಾಯಸ್ವಾಮಿಗೆ ಅರ್ಪಿಸುತ್ತಿದ್ದೇನೆ. ಪಕ್ಷಾಭೇದ ಹಾಗೂ ಜಾತಿ ಭೇದವಿಲ್ಲದೆ ಪ್ರತಿಯೊಂದು ಹಳ್ಳಿಗಳಿಗೂ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು 30 ರಿಂದ 40 ಲಕ್ಷ ರೂಪಾಯಿಗಳ ಕಾಮಗಾರಿ ಪ್ರಗತಿಯಲ್ಲಿದೆ. ತಾಂತ್ರಿಕವಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಅನುಮೋದನೆ ದೊರೆತಿದ್ದು ಕಾಮಗಾರಿ ಎರಡು ದಿನಗಳಲ್ಲಿ ಚಾಲನೆ ಕೊಡಲಾಗುವುದು ತುರುವೇಕೆರೆ ಪಟ್ಟಣವನ್ನು ರಾಜ್ಯದಲ್ಲಿಯೇ ಮಾದರಿಯಾದ ಪಟ್ಟಣವನ್ನಾಗಿ ಮಾಡಲು ಪಣತೊಟ್ಟಿದ್ದೇನೆ . ಪಟ್ಟಣದಲ್ಲಿರುವ ಐತಿಹಾಸಿಕ ದೇವಾಲಯಗಳು ಶಿಥಿಲವಾಗಿದ್ದು ಅವುಗಳನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಅನುದಾನವನ್ನು ತಂದು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಮುಂದಿನ ದಿನಗಳಲ್ಲಿ ನನಗೆ ಅವಕಾಶ ಕೊಟ್ಟರೆ ಹೆಚ್ಚಿನ ಅನುದಾನಗಳನ್ನು ತಂದು ತಾಲೂಕನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಟಿ.ಕೆ.ಚಿದಾನಂದ್ ತೆವಳುತ್ತಾ ಸಾಗಿ ಮೇಲೆದೆ ನಿಂತಿದ್ದ ಕಟ್ಟಡಕ್ಕೆ ಇಂದು ಮುಕ್ತಿ ಸಿಕ್ಕಿದ್ದು ಸಾರ್ವಜನಿಕರಿಗೆ ಖುಷಿಯಾಗಿದೆ ಈ ಸಂಕೀರ್ಣದಲ್ಲಿ 50 ಮಳಿಗೆಗಳಿದ್ದು ಸರ್ಕಾರಿ ನಿಯಮಾವಳಿಗಳ ಪ್ರಕಾರ ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳಿಗೆ ಶಾಸಕರು ಸ್ವಂತ ಖರ್ಚಿನಲ್ಲಿ ಉಚಿತವಾಗಿ ದೊಡ್ಡ ಕೊಡೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರಭಾಕರ್ , ಉಪಾಧ್ಯಕ್ಷ ಶೀಲಾ ಶಿವಪ್ಪ, ನಾಯಕ ಸದಸ್ಯರುಗಳಾದ ಮೇಘನಾ , ಭಾಗ್ಯ ,ರವಿ ಕೆ., ಅಂಜನ್ ಕುಮಾರ್, ಯಜಮಾನ ಮಹೇಶ್, ಆಶಾ ರಾಣಿ , ಶೋಭಾ, ಉಮೇಶ್, ನವೀನ್ ಬಾಬು , ಆನಂದ್ ಕುಮಾರ್ , ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಲಕ್ಷ್ಮಣ್ ಕುಮಾರ್, ಕಿರಿಯ ಅಭಿಯಂತರ ಬಿ. ಹರೀಶ್ ಹಾಗೂ ಪಟ್ಟಣ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA