ಬೆಳಗಾವಿ: ಲಕ್ಷ್ಮೀ ಟೇಕಡಿಯಲ್ಲಿ ತನ್ನದೇ ಆದ ಸಂಗೀತ ಶಾಲೆಯನ್ನು ನಡೆಸುತ್ತಿರುವ ಹಾಗೂ ಸುಸಜ್ಜಿತ ಕಟ್ಟಡ ಹೊಂದಿರುವ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆಯು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸಹಯೋಗದಲ್ಲಿ ರವಿವಾರ ಮಾರ್ಚ 5, 2023 ರಂದು ಬೆಳಗಾವಿಯ ನೆಹರೂ ನಗರದ ಎಸ್ ಜಿ.ಬಾಳೇಕುಂದ್ರಿ ಇಂಜನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ಉತ್ಸವ”ಮುಂಜಾನೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅದ್ಧೂರಿಯಿಂದ ಜರುಗಿತು.
ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಕಲಾವಿದರು ಮತ್ತು ಗೋವೆಯ ಕನ್ನಡಿಗ ಕಲಾವಿದರು ಭಾಗವಹಿಸಿದ್ದ
ಉತ್ಸವವನ್ನು ಗಡಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರು ಉದ್ಘಾಟಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ ವಹಿಸಿದ್ದರು. ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕ ಹಿರಿಯ ಕನ್ನಡ ಹೋರಾಟಗಾರ ಬಾಸೂರು ತಿಪ್ಪೇಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅತಿಥಿಗಳಾಗಿದ್ದರು.
ಸಂಜೆ 4 ಗಂಟೆಗೆ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಚಿಂತಕ ಡಾ.ವೈ.ಬಿ.ಹಿಮ್ಮಡಿ ವಹಿಸಿದ್ದರು.ಸಾಹಿತಿ ಡಾ.ರಾಮಕೃಷ್ಣ ಮರಾಠೆ ಅವರು “ಬಹು ಸಂಸ್ಕೃತಿಯ ಭಾರತ” ಎಂಬ ವಿಷಯದ ಮೇಲೆ ಮಾತನಾಡಿದರು. ಸಂಜೆ 6 ಗಂಟೆಗೆ ನಡೆದ ಸಮಾರೋಪಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ವಹಿಸಿದ್ದರು.
ಹಿರಿಯಸಾಹಿತಿ ಡಾ.ಡಿ.ಎಸ್.ಚೌಗುಲೆ, ಹಿರಿಯ ಕನ್ನಡ ಹೋರಾಟಗಾರ ರಮೇಶ ಸೊಂಟಕ್ಕಿ ಹಾಗೂ ಗೋವೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಅತಿಥಿಗಳಾಗಿದ್ದರು.
ಕರಡಿ ಮಜಲು,ಸೋಬಾನ ಪದ, ಡೊಳ್ಳು ಕುಣಿತ,ದೀಪ ನೃತ್ಯ,ಸುಗಮ ಸಂಗೀತ,ನಾಡ ಗೀತೆ ನೃತ್ಯ,ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಏಕಪಾತ್ರಾಭಿನಯ,ಸಮೂಹ ನೃತ್ಯ, ಕಿರು ನಾಟಕ,ಕರಾಟೆ ಮೂಲಕ ಆತ್ಮ ರಕ್ಷಣೆ ಪ್ರಾತ್ಯಕ್ಷಿಕೆ,ವೀರಗಾಸೆ, ಕನ್ನಡಾಭಿಮಾನದ ಗಾಯನ ಹಾಗೂ ನೃತ್ಯ,ಭಕ್ತಿ ಗೀತೆ ಹೀಗೆ ಅನೇಕ ಕಲೆಗಳ ಪ್ರದರ್ಶನಗಳು 25 ಕ್ಕಿಂತಲೂ ಅಧಿಕ ತಂಡಗಳಿಂದ ಅವ್ಯಾಹತವಾಗಿ ನಡೆದವು.
ಈ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆದದ್ದು ಇತ್ತೀಚೆಗೆ ಇದೇ ಮೊದಲ
ಬಾರಿಯಾಗಿದೆ. ಉತ್ಸವ ನಡೆದ ವೇದಿಕೆಗೆಡಾ.ಪುನೀತ ರಾಜಕುಮಾರ ವೇದಿಕೆಎಂದು ಹೆಸರಿಡಲಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


