ತುಮಕೂರು: ಇಂದು ರಾಜ್ಯವ್ಯಾಪಿ ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಎಐಡಿಎಸ್ ಓ ದಿಂದ ಶುಭಾಶಯ ಕೋರಲಾಯಿತು.
ಎಐಡಿಎಸ್ಓ ಸಂಘಟನೆಯ ಜಿಲ್ಲಾಧ್ಯಕ್ಷರು ಅಶ್ವಿನಿ, ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಇಂದು ತುಮಕೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ, “ಶಿಕ್ಷಣವೆಂದರೆ ಕೇವಲ ಮಾಹಿತಿ ಹೊಂದುವುದಲ್ಲ, ಬದಲಿಗೆ ಚಿಂತನೆಗಾಗಿ ಮೆದುಳನ್ನು ತರಬೇತುಗೊಳಿಸುವುದು” ಎಂಬ ಆಲ್ಬರ್ಟ್ ಐನ್ಸ್ಟಿನ್ನರ ಸೂಕ್ತಿಯನ್ನು ಹೊಂದಿರುವ ಬಿತ್ತಿ ಪತ್ರವನ್ನು ಹಿಡಿದು ವಿದ್ಯಾರ್ಥಿಗಳಿಗೆ ಒತ್ತಡಕ್ಕೆ ಒಳಗಾಗದೆ ನಿರಾಳವಾಗಿ ಪರೀಕ್ಷೆಗಳನ್ನು ಬರೆಯುವಂತೆ ಸಲಹೆ ನೀಡಿದರು.
ತುಮಕೂರಿನಲ್ಲಿ, ಸರ್ಕಾರಿ ಪಿಯು ಕಾಲೇಜು, ಸಿದ್ದಾಗಂಗ ಪಿಯು ಕಾಲೇಜು, ಎಂಪ್ರೆಸ್ ಪಿಯು ಕಾಲೇಜು ಹಾಗು ಇನ್ನಿತರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು ಎಂದು ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


