ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ 23 ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ನೆರವಿಗೆ ಇಂಡೋಮಿಮ್ ಕಂಪನಿಯ ವತಿಯಿಂದ 70 ಸ್ಮಾರ್ಟ್ ಟಿ.ವಿ.ಗಳನ್ನು ವಿತರಿಸಲಾಯಿತು.
ಗುರುವಾರ ಇದರ ಅಂಗವಾಗಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಮತ್ತೀಕೆರೆ ಸರಕಾರಿ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಂಪನಿಯ ಅಧ್ಯಕ್ಷ ಜಯರಾಂ ಅವರು ಈ ಸಾಧನಗಳನ್ನು ಸಚಿವರ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, “ಜಯರಾಂ ಅವರು ಈಗ ಕೊಟ್ಟಿರುವುದು ಸೇರಿದಂತೆ ಇದುವರೆಗೆ ಒಂದು ಕೋಟಿ ರೂಪಾಯಿ ಮೊತ್ತದ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಗಳನ್ನು ಕ್ಷೇತ್ರದ ಶಾಲೆಗಳಿಗೆ ಕೊಟ್ಟಿದ್ದಾರೆ. ಈಗ ಬಡವರ ಮಕ್ಕಳ ಸುಗಮ ಕಲಿಕೆಗೆ 50 ಇಂಚಿನ ಐವತ್ತು ಟಿ.ವಿ.ಗಳನ್ನು ಕೊಟ್ಟಿದ್ದಾರೆ. ಇದು ಅನುಕರಣಯೋಗ್ಯ ಸಂಗತಿಯಾಗಿದೆ” ಎಂದರು.
ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳಲ್ಲಿ ಈವರೆಗೆ 1,400 ಟ್ಯಾಬ್ ಮತ್ತು 23 ಸ್ಮಾರ್ಟ್ ಬೋರ್ಡ್ ಕೊಡಲಾಗಿದೆ. ಇದರಿಂದ ಆಧುನಿಕ ಮತ್ತು ವೈಜ್ಞಾನಿಕ ಕಲಿಕೆ ಸಾಧ್ಯವಾಗಿದೆ. ಈ ಮೂಲಕ ಎಲ್ಲ ಶಾಲೆಗಳೂ ಸ್ಮಾರ್ಟ್ ಆದಂತಾಗಿವೆ ಎಂದು ಅವರು ನುಡಿದರು.
ಮಕ್ಕಳು ಶಾಲೆಯಲ್ಲಿ ಓದು, ಆಟ ಮತ್ತು ಕುಣಿತ ಎಲ್ಲವನ್ನೂ ಅನುಭವಿಸಬೇಕು. ರಾಜ್ಯದ ಪದವಿ ಕಾಲೇಜುಗಳಲ್ಲಿ 9,000 ಕೊಠಡಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಇಂದು ಕಲಿಕೆಯ ಜತೆಗೆ ಕೌಶಲ್ಯಾಭಿವೃದ್ಧಿಗೂ ಒತ್ತು ಕೊಡಲಾಗುತ್ತಿದೆ. ಇಂತಹ ಶೈಕ್ಷಣಿಕ ಉಪಕ್ರಮ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಯುವಜನರಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕು ಎನ್ನುವುದೇ ಸರಕಾರದ ಗುರಿ ಆಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


