ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದ ಆವರಣದಲ್ಲಿ ಜನ ಸಂಪರ್ಕ ಸಭೆ ಹಾಗೂ ಕೆ.ಸಿ.ನಾರಾಯಣಗೌಡ ಅಭಿಮಾನಿ ಬಳಗದ ವತಿಯಿಂದ ಹೋಬಳಿ ಮಟ್ಟದ ಬೃಹತ್ ಸಮಾವೇಶ ನಡೆಯಿತು.
ಗಣ್ಯರೊಂದಿಗೆ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಚಿವ ನಾರಾಯಣಗೌಡ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಯಾರು ತಂದೆ ತಾಯಿ ಸೇವೆ ಮಾಡುತ್ತಾರೋ ಅಂಥವರಿಗೆ ದೇವರು ಉತ್ತಮ ಭವಿಷ್ಯ ಕೊಡುತ್ತಾನೆ. ಅದಕ್ಕೆ ಉದಾಹರಣೆಯಾಗಿ ನಾನೇ ಸಾಕ್ಷಿ ಎಂದರು.
ಕ್ಷೇತ್ರಕೆ ಯಾರೇ ಬರಲಿ ಅಭಿವೃದ್ಧಿ ಕೆಲಸ ಆಗಿಲ್ಲ ಅನ್ನುತ್ತಾರೆ. ಆದರೆ ಇಲ್ಲಿ ಯಾರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿಲ್ಲ, ಮತದಾರ ದೇವರುಗಳು ನಿಮಗೆ ಗೊತ್ತು. ರಾಜಕೀಯದಲ್ಲಿ ಇರಬೇಕಾ ಇರಬಾರದೆಂದು ತೀರ್ಮಾನ ನಿಮ್ಮದು. ಗೂಂಡ ರಾಜಕಾರಣಿಗಳಿಗೆ ಭಯಪಡುವ ಅಗತ್ಯ ಇಲ್ಲ ಆದರಿಂದ ಈ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡಬೇಕಾದರೆ, ಈ ಸಲ ನನಗೆ ಆಶೀರ್ವದಿಸಿ ಎಂದು ಅವರು ಮತದಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾದ ವಾಸು, ಪಕ್ಷದ ಮುಖಂಡರುಗಳಾದ ಅಂಬರೀಶ್, ಮಂಜಣ್ಣ, ಪಾಪಣ್ಣ, ಪುಟ್ಟಣ್ಣ, ಜವರೇಗೌಡರು, ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್ವರಿ, ಉಪಾಧ್ಯಕ್ಷರಾದ ಸತೀಶ್, ಚಂದ್ರಮೋಹನ್, ಅಕ್ಕಿ ಹೆಬ್ಬಾಳು ಜಯರಾಮ್ ನಾಯಕ, ಲೋಹಿತ್, ಅಣ್ಣಯ್ಯ, ಸುರೇಶ್ ಸಾರಂಗಿ, ನಾಗಣ್ಣ ಮತ್ತು ಹೋಬಳಿಯ ಸುತ್ತ ಮುತ್ತ ಹಳ್ಳಿಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜು, ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


