ಹೆಚ್.ಡಿ.ಕೋಟೆ: ತಾಲ್ಲೂಕಿನ ಮಲಾರ ಕಾಲೋನಿ ಗ್ರಾಮದಲ್ಲಿ ಚಾಮರಾಜನಗರ ಲೋಕಸಭಾ ಮಾಜಿ ಸಂಸದರಾದ ಆರ್.ಧ್ರುವನಾರಾಯಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು
ನಂತರ ಮಾತನಾಡಿದ ಧ್ರುವನಾರಾಯಣರವರ ಅಭಿಮಾನಿ, ಗ್ರಾಮದ ಮುಖಂಡ ಮಲಾರ ಮಹದೇವು ಅವರು, ಧ್ರುವನಾರಾಯಣರವರು ಮಿನುಗುವ ನಕ್ಷತ್ರದಂತೆ ಇಡೀ ಸಮಾಜಕ್ಕೆ ಬೆಳಕನ್ನು ಚೆಲ್ಲಿದ ಒಬ್ಬ ಪ್ರತಿಭಾನ್ವಿತ ರಾಜಕಾರಣಿ, ಅವರನ್ನು ಕಳೆದುಕೊಂಡಿರುವುದರಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ದುಗುಡವನ್ನು ಹೊರಹಾಕಿದರು
ಮಲಾರ ಕಾಲೋನಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಅಕ್ಷರಸ್ಥ ಯುವಕರು, ಧ್ರುವನಾರಾಯಣ್ ರವರಿಂದ ಸಹಾಯ ಪಡೆದ ಎಷ್ಟೋ ಬಡಕುಟುಂಬಗಳು ಕಂಬನಿ ಮಿಡಿಯುತಿದ್ದದ್ದು ಎದ್ದು ಕಾಣುತಿತ್ತು.
ಶ್ರದ್ಧಾಂಜಲಿ ಸಭೆಯಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರಮೂರ್ತಿ, ಬಿ.ಟಿ.ಕೃಷ್ಣಮೂರ್ತಿ, ಮಿಲ್ ನಾಗಯ್ಯ, ಮಹದೇವಪ್ರಸಾದ್, ಸಣ್ಣಸ್ವಾಮಯ್ಯ, ಪದ್ಮರಾಜು, ಮಹದೇವು, ತಮ್ಮಯ್ಯ, ಪಿ ಮಲಿಯಯ್ಯ, ಮದೇವು, ಎಲ್.ಮಲ್ಲಿಕ್, ಮೂರ್ತಿ, ಬಸವರಾಜು, ನೂರಾರು ಧ್ರುವನಾರಾಯಣ ರವರ ಅಭಿಮಾನಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


