ಬೆಳಗಾವಿ ನಗರ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು ಜಾತ್ಯತೀತ ಜನತಾದಳವನ್ನು ಶಂಕರಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿದರು.
ಶಂಕರಗೌಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಜಿಲ್ಲೆ ಯಲ್ಲಿ ಶಕ್ತಿ ಹೀನವಾಗಿರುವ ಜೆ ಡಿಎಸ್ ಪಕ್ಷವನ್ನುತಳ ಮಟ್ಟದಿಂದ ಕಟ್ಟುತ್ತೇವೆ ಮತ್ತೆ ಜಿಲ್ಲೆಯಲ್ಲಿ ಜೆ ಡಿ ಎಸ್ ಅಸ್ತಿತ್ವದಲ್ಲಿ ಬರಲಿದೆ. ಅದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಕಾರ್ಯಕರ್ತರನ್ನು ಜಾಗೃತಗೊಳಿಸುತ್ತಾ ಹಳೆ ಕಾರ್ಯಕರ್ತರನ್ನು ಹಾಗೂ ಹೊಸದಾಗಿ ಸದಸ್ಯತ್ವ ನಿಡುತ್ತಾ ಪಕ್ಷಕ್ಕೆ ಸೇರ್ಪಡೆ ಮಾಡುತ್ತಾ ಇದ್ದೇವೆ.
ಅದರ ಭಾಗವಾಗಿಯೇ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು ಜೆ ಡಿ ಎಸ್ ಪಕ್ಷವನ್ನು ಸೇರಿದ್ದಾರೆ. ಪಕ್ಷ ಬಲಿಷ್ಠ ಗೊಳ್ಳಲಿದೆ ಸ್ವಂತ ಬಲದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಹಲವಾರು ವರ್ಷಗಳಿಂದ ಸಮಾಜ ಸೇವೆ ಹಾಗೂ ಕನ್ನಡಪರ ಹೋರಾಟಗಾರರಾಗಿ ನಾನು ತೊಡಗಿಸಿಕೊಂಡಿದ್ದೇನೆ ಈಗ ಜಾತ್ಯತೀತ ಜನತಾದಳದ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ. ನಮ್ಮ ನಾಯಕರಗಳಾದ ವಿವೇಕ್ ರಾವ್ ಪಾಟೀಲ್ ಹಾಗೂ ನಮ್ಮ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ .ಡಿ ಕುಮಾರಸ್ವಾಮಿ ಹಾಗೂ ದೇಶದ ಹಿರಿಯ ಹಾಗೂ ಮುತ್ಸದ್ದಿ ನಾಯಕರದ ಎಚ್ .ಡಿ ದೇವೇಗೌಡರವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ.
ಜಾವಿದ್ ಅಹಮದ್ ಹಿರೇ ಕೊಡಿ, ಮಸ್ತಾನ್ ಬಾಳೆಕುಂದ್ರಿ, ಸ್ಥಾಯಿರ ಅನುಗೋಳ್, ಕಸ್ತೂರಿ ಬಾಬಿ, ರೇಷ್ಮಾ ಕಿತ್ತೂರ್, ಮಲ್ಲಿಕಾ ಬಗ್ಗೆ , ಮಂಜುಳಾ ಸುಗ್ಗಿ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


