ತುರುವೇಕೆರೆ: ತಾಲೂಕಿನಲ್ಲಿ ನಾಳೆ 14ನೇ ಮಂಗಳವಾರ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲೇ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದೆ.
ಈ ಸಮಾವೇಶಕ್ಕೆ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ, ಕಾರ್ಯಾಧ್ಯಕ್ಷೆ ನಜ್ಮಾ ನಜೀರ್, ನೌಶಿದ್ದು ಖಾನ್, ಇನ್ನು ಅನೇಕ ರಾಜ್ಯಮಟ್ಟದ ಜಿಲ್ಲಾಮಟ್ಟದ ಜೆಡಿಎಸ್ ಮುಖಂಡರುಗಳು ಆಗಮಿಸಲಿದ್ದು,
ಈ ಸಮಾವೇಶ ನಮ್ಮ ತಾಲೂಕಿನಲ್ಲಿರುವ 80 ಹಳ್ಳಿಯಿಂದ ನಮ್ಮ ಪಕ್ಷದ ಮುಖಂಡರುಗಳು ಕಾರ್ಯಕರ್ತರನ್ನು ಕರೆತಂದು, ರಾಜ್ಯಾಧ್ಯಕ್ಷರು ಬರುವ ಹಿನ್ನೆಲೆಯಲ್ಲಿ ಸಂಘಟನೆಗೆ ಒತ್ತುಕೊಟ್ಟು ಚುನಾವಣೆ ಹತ್ತಿರವಿರುವುದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ, ಹಾಗಾಗಿ ಮೊಟ್ಟ ಮೊದಲನೇ ಬಾರಿಗೆ ನಮ್ಮ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಜಫ್ರುಲ್ಲಾ ಖಾನ್ ಹೇಳಿದರು ,
ಇದೆ ವೇಳೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ನಯಾಜ್, ಅಸ್ಲಾಂ, ಯಾಸಿನ್, ನಯಾಜ್ ಪಾಶ, ಫಯಾಜ್, ಹಾದಿಲ್, ವಸಿಂ, ಜಾಕೀರ್, ಇನ್ನು ಅನೇಕ ಕಾರ್ಯಕರ್ತರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA