ಹೆಚ್.ಡಿ.ಕೋಟೆ: ಇಂದು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಾತ್ಯಾತೀತ ಜನತಾದಳ ವತಿಯಿಂದ ನಾಡು ಕಂಡ ಅಪ್ರತಿಮ ರಾಜಕಾರಣಿ ಆರ್.ಧ್ರುವನಾರಾಯಣ್ ರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ನಾನು ಮತ್ತು ಧ್ರುವನಾರಾಯಣ್ ರವರು ಅತ್ಯಂತ ಆತ್ಮೀಯವಾಗಿ ಇದ್ದೆವು. ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೆವು. ಆದರೆ ಕಳೆದ ಒಂಬತ್ತು ವರ್ಷದಿಂದ ಅವರ ನನ್ಮ ಸ್ನೇಹ ಮುರಿದ್ದಿತ್ತು, ಆದರೆ ಯಾವತ್ತೂ ನೇರ ನೇರ ನಿಂತು ಜಗಳವಾಗಲಿ. ಮಾತುಕತೆಯಾಗಲಿ ಇರಲಿಲ್ಲ. ಧ್ರುವನಾರಾಯಣ್ ರವರು ಯಾವುದೇ ವೇದಿಕೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿಯಾಗಲಿ ನನ್ನ ಬಗ್ಗೆ ಕೆಟ್ಟದಾಗಿ ಅಥವಾ ನನ್ನ ವಿರೋಧವಾಗಿ ಮಾತನಾಡಲಿಲ್ಲ. ಇಂತಹ ಸಹೃದಯ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲದಿರುವುದು ನೋವಿನ ಸಂಗತಿ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರ,ಗೋಪಾಲಸ್ವಾಮಿ, ಚಾ.ನಂಜುಂಡ ಮೂರ್ತಿ, ಫಿಸ್ ಸಲೀಮ್ ತಾರಕ ಮನ್ಸೂರ್, ಮಂಚಯ್ಯ, ಕಡಕೊಳ ನಾಗರಾಜು, ಧ್ರುವನಾರಾಯಣ ಅಭಿಮಾನಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


