ಬೆಳಗಾವಿ ನಗರದಲ್ಲಿ ಇಂದು ಬೆಳಗಾವಿ ವಾರ್ಡ್ ಸಮಿತಿ ಬಳಗ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಪ್ರತಿ ವಾರ್ಡಿಗೆ ಒಂದು ವಾರ್ಡ್ ಕಮಿಟಿ ಮಾಡಬೇಕೆಂದು ವಾರ್ಡ್ ಸಮಿತಿ ಬಳಗದಿಂದ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಮನವಿ ನೀಡಿದ್ದೇವೆ ಕೆ ಎಂ ಸಿ ಕಾಯ್ದೆ 1976 ,ಸೆಕ್ಷನ್ 13ರ ಪ್ರಕಾರ, ಸಂವಿಧಾನಾತ್ಮಕವಾಗಿ ಶಾಸನತ್ಮಕವಾಗಿ ಮಹಾನಗರ ಪಾಲಿಕೆ ಅಡಿಯಲ್ಲಿ ಕಾನೂನಾತ್ಮಕವಾಗಿ ಕಡ್ಡಾಯವಾಗಿ ವಾರ್ಡ್ ಸಮಿತಿಗಳು ರಚನೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ ಬಿ ಎಂ ಪಿ ಬೆಂಗಳೂರು,ಹುಬ್ಬಳ್ಳಿ ಧಾರವಾಡ, ಮಂಗಳೂರು, ಹಾಗೂ ಕಲ್ಬುರ್ಗಿ, ಮಹಾನಗರ ಪಾಲಿಕೆಗಳಲ್ಲಿ ವಾರ್ಡ್ ಕಮಿಟಿಗಳನ್ನು ರಚನೆ ಮಾಡಲು ಪ್ರಾರಂಭಿಸಿದ್ದಾರೆ ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇನ್ನೂ ಇದರ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಅದರ ಸಲುವಾಗಿ ವಾರ್ಡ್ ಕಮಿಟಿ ಬಳಗವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅರವಿಂದ್ ಕುಲಕರ್ಣಿ ವಾರ್ಡ್ ಕಮಿಟಿ ಕುರಿತು ಮಾಹಿತಿ ನೀಡಿದರು.
ಇದು ಪ್ರತಿಯೊಂದು ವಾರ್ಡಿನಲ್ಲಿ ನಾಗರಿಕ ರಿಂದ ರಚನೆಗೆ ಒಳಪಡುವ ಕಮಿಟಿ ಇದಾಗಿದ್ದು, ಈ ಕಮಿಟಿಯಲ್ಲಿ ಹತ್ತು ಜನ ಸದಸ್ಯರುಗಳಿದ್ದು ಮೂರು ಜನ ಕನಿಷ್ಠ ಮಹಿಳಾ ಸದಸ್ಯರನ್ನು ಹೊಂದಿರುತ್ತದೆ. ಈ ಕಮಿಟಿಗೆ ಕಾರ್ಯದರ್ಶಿಯಾಗಿ ನೇಮಕವನ್ನು ಮಹಾನಗರ ಪಾಲಿಕೆ ಆಯುಕ್ತರು ನಿಯೋಜನಿಸುತ್ತಾರೆ (ಅವರ ಅಧೀನದಲ್ಲಿರುವ ಸರ್ಕಾರಿ ಸಿಬ್ಬಂದಿ ಯಾಗಿರುತ್ತಾರೆ. ಕಮಿಟಿ ಉದ್ದೇಶಗಳು ಏನಂದರೆ ? ವಾರ್ಡ್ಗ ಳಲ್ಲಿ ಅನುದಾನಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುವುದು ಯೋಜನೆಗಳನ್ನು ರೂಪಿಸುವುದು, ಹಾಗೂ ಪ್ರತಿ ತಿಂಗಳಗೊಮ್ಮೆ ಸಭೆ ನಡೆಸಿ ಅನುದಾನಗಳ ವಿವರಣೆ ನೀಡುತ್ತಾ, ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಈ ಕಮಿಟಿಯ ಉದ್ದೇಶವಾಗಿದೆ.
ಸಂದರ್ಭದಲ್ಲಿ ಬೆಳಗಾವಿ ವಾರ್ಡ್ ಕಮಿಟಿ ವಾರ್ಡ್ ಸಂಚಾಲಕರಾದ ಗೌರಿ ಗಜಬರ್, ಸುಷ್ಮಾ ಭಟ್, ಪ್ರಶಾಂತ್ ಸೈಕರ, ಪ್ರೇಮ್ ಚೌಗಲಾ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


