ಆಧುನಿಕತೆ ಭರಾಟೆಯಲ್ಲಿ ಮೈಸೂರಿನ ಸಿನಿಮಾ ಮಂದಿರಗಳು ಇತಿಹಾಸದ ಪುಟ ಸೇರುತ್ತಿದ್ದು, ನಗರದ ಬಹುತೇಕ ಚಿತ್ರಮಂದಿರಗಳು ಅಳಿವಿನ ಅಂಚಿನಲ್ಲಿವೆ. ಅಂತೆಯೇ ಗತಕಾಲದ ಇತಿಹಾಸ ಹೊಂದಿದ್ದ ಮೈಸೂರಿನ ‘ಲಕ್ಷ್ಮಿ ಟಾಕೀಸ್’ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಅಂಗೈಯಲ್ಲೇ ಸಿನಿಮಾ ನೋಡುವ ಕಾಲ ಬಂದ ನಂತರ ಸಿನಿಪ್ರಿಯರು ಸಿನಿಮಾ ಥಿಯೇಟರ್ ಗಳತ್ತ ಬರುವುದನ್ನ ಕಡಿಮೆ ಮಾಡಿದ್ದು, ಮೈಸೂರಿನಲ್ಲಿ ಒಂದೊಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿ ಅವನತಿಯತ್ತ ಸಾಗಿತ್ತಿವೆ. ಈಗಾಗಲೇ ಶಾಂತಲ, ನಾಗರಾಜ, ಲಕ್ಷ್ಮಿ, ತಿಬ್ಬಾದೇವಿ ಸೇರಿದಂತೆ ನಗರದ ಹತ್ತಾರು ಚಲನಚಿತ್ರ ಮಂದಿರ ಬಾಗಿಲು ಮುಚ್ಚಿವೆ.
ಈಗ ಅದೇ ಸಾಲಿಗೆ ಲಕ್ಷ್ಮಿ ಟಾಕೀಸ್ ಸೇರಿದ್ದು 75 ವರ್ಷಗಳ ಹಳೆಯದಾದ ಲಕ್ಷ್ಮಿ ಟಾಕೀಸ್ ಅನ್ನು ತೆರವುಗೊಳಿಸಲಾಗುತ್ತಿದೆ. ಲಕ್ಷ್ಮಿ ಟಾಕೀಸ್ ನಗರದ ಹೃದಯ ಭಾಗದಲ್ಲಿದ್ದು ಒಂದು ಕಾಲದ ಪ್ರಸಿದ್ದ ಸಿನಿಮಾ ಮಂದಿರವಾಗಿತ್ತು. ಇಂದಿನಿಂದ ಲಕ್ಷ್ಮಿ ಥಿಯೇಟರ್ ತೆರವು ಕಾರ್ಯ ನಡೆಯುತ್ತಿದೆ .
ಲಕ್ಷ್ಮಿ ಟಾಕೀಸ್ ಮಾಲೀಕರು ಬೆಂಗಳೂರು ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದು, ಹಳೇ ಕಟ್ಟಡ ಕೆಡವಿ ಹೊಸದಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಉಳಿದಿವೆ ಎಂದು ಹೇಳಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


