ತುಮಕೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೇ ಕಾನೂನು ಬಾಹಿರವಾಗಿ ಬಾಲ್ಯವಿವಾಹವಾದ ಆರೋಪಿಗೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ಮತ್ತು FTSC1 ನ್ಯಾಯಾಲಯ (ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ) ವು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
25/07/2021ರಂದು ಆರೋಪಿ ಹನುಮಂತರಾಜು ಎಂಬಾತ ತಾನು ಎರಡು ಮಕ್ಕಳ ತಂದೆಯಾಗಿದ್ದರೂ ಸಹ 15 ವರ್ಷದ ಬಾಲಕಿಯನ್ನು ಸೀತಕಲ್ಲು ಬೈಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆಯ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದು ಬಾಲಕಿಯನ್ನು ವಿವಾಹವಾಗಿದ್ದ. ಅದಕ್ಕೂ ಮೊದಲು ಬಾಲಕಿಯ ಮನೆಗೆ ಹೋಗಿ ಬಾಲಕಿಯ ಮೇಲೆ ಹಲವಾರು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಮದುವೆ ಬಳಿಕ ಆರೋಪಿಯು ಬಾಲಕಿಯನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದು, ಬಾಲಕಿಯನ್ನು ಪೊಲೀಸರು ಬಳಿಕ ಆಕೆಯ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.
ನಂತರ ಬಾಲಕಿಯ ತಂದೆ ಆರೋಪಿಯ ವಿರುದ್ಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ತನಿಖೆ ನಡೆಸಿದ ಮಹಿಳಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ತನಿಖೆ ಮಾಡಿ ಆರೋಪಿ ವಿರುದ್ಧ ಕಲಂ 376 ಐಪಿಸಿ ಕಲಂ 06 ಪೋಕ್ಸೋ ಆಕ್ಟ್ ಹಾಗೂ ಕಲಂ 09.10 ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಅಧಿಕ ಸತ್ರ ನ್ಯಾಯಾಲಯ ಗೌರವಾನ್ವಿತ ನ್ಯಾಯಾಧೀಶರಾದ ಸಂಧ್ಯಾ ರಾವ್ ಪಿ. ಅವರು ಆರೋಪಿ ಹನುಮಂತರಾಜುಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಹಾಗೂ ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರ ಹಾಗೂ ಆರೋಪಿಗೆ ವಿಧಿಸಿದ ದಂಡದಲ್ಲಿ 95 ಸಾವಿರ ರೂ.ಗಳು ಒಟ್ಟು 4.95 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದ್ದರು.
ವರದಿ: ಶಿವಕುಮಾರ್ ಮೇಷ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA