ಮುಂಬೈ: ಹುಲಿ ಮತ್ತು ಚಿರತೆಗಳ ದಾಳಿಗೆ 2022ರಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ 53 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ.
ಶಾಸಕ ಬಂಟಿ ಭಂಗಾಡಿಯಾ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಅವರು, ಚಂದಾಪುರ ಜಿಲ್ಲೆಯೊಂದರಲ್ಲೇ ಹುಲಿಗಳ ದಾಳಿಗೆ 44 ಮಂದಿ ಹಾಗೂ ಚಿರತೆ ದಾಳಿಗೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
2022ರಲ್ಲಿ ಚಿರತೆ, ಜಿಂಕೆ, ಕರಡಿ, ಮತ್ತು ನವಿಲುಗಳ ಸೇರಿದಂತೆ ಒಟ್ಟು 53 ವನ್ಯಜೀವಿಗಳು ಮೃತಪಟ್ಟಿವೆ. ಇವುಗಳಲ್ಲಿ 9 ಹುಲಿಗಳು ಮತ್ತು 3 ಚಿರತೆಗಳು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿವೆ. ಅದೇ ವರ್ಷದಲ್ಲಿ ಕನಿಷ್ಠ ಐದು ಚಿಟಾಲ್ಗಳು ಮತ್ತು ಮೂರು ಕಾಡುಹಂದಿಗಳನ್ನು ಕಳ್ಳ ಬೇಟೆಗಾರರು ಕೊಂದಿದ್ದಾರೆ ಎಂದು ಸಚಿವರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


