ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಹುರುನ್ ಇಂಡಿಯಾ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಅಂಬಾನಿ ಸತತ ಮೂರನೇ ವರ್ಷ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಹೊಂದಿದ್ದಾರೆ.
ಅವರು ಈ ಪಟ್ಟಿಯಲ್ಲಿ ಶ್ರೀಮಂತ ಟೆಲಿಕಾಂ ಉದ್ಯಮಿ ಕೂಡ ಆಗಿದ್ದಾರೆ. ಹಿಂಡರ್ ಬರ್ಗ್ ವರದಿಯಿಂದಾಗಿ ಭಾರೀ ಆರ್ಥಿಕ ಹಿನ್ನಡೆ ಎದುರಿಸಿದ್ದ ಗೌತಮ್ ಅದಾನಿ ಅವರಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ.
ವರದಿಗಳ ಪ್ರಕಾರ, ಹಿಂಡರ್‌ಬರ್ಗ್ ವಿವಾದ ಬೆಳಕಿಗೆ ಬರುವ ಮೊದಲು ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದಾಗ್ಯೂ, ಹಿಂಡರ್‌ಬರ್ಗ್ ವರದಿಯು ಷೇರು ಮಾರುಕಟ್ಟೆಗಳನ್ನು ಒಳಗೊಂಡಂತೆ ಅವರ ಹಣಕಾಸಿನ ಮೇಲೆ ಭಾರಿ ಪ್ರಭಾವ ಬೀರಿತು. ಪ್ರತಿ ವಾರ 3000 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಈ ವರ್ಷದ ಶ್ರೇಯಾಂಕದಲ್ಲಿ ಅವರು ಹನ್ನೊಂದು ಸ್ಥಾನ ಕುಸಿದಿದ್ದಾರೆ.
ಹುರುನ್ ಗ್ಲೋಬಲ್‌ನ ಅಂಕಿಅಂಶಗಳ ಪ್ರಕಾರ, ಅಮೇರಿಕಾ ಮತ್ತು ಚೀನಾದ ನಂತರ ಭಾರತವು ಅತಿ ಶ್ರೀಮಂತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


