ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅದಾನಿ ವಿರುದ್ದ ತನಿಖೆ ನಡೆಸಲು ಧೈರ್ಯವಿಲ್ಲ. ಅದಾನಿ ಮನೆ ಮೇಲೆ ಸಿಬಿಐ,ಇಡಿ ದಾಳಿ ಮಾಡಿಲ್ಲ ಮೋದಿಯನ್ನ ಜನ ಕಳ್ಳರ ಸರ್ದಾರ್ ಎಂದು ಕರೆಯುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗುಡುಗಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅರವಿಂದ ಕೇಜ್ರಿವಾಲ್, ಬಿಜೆಪಿ ಸೇರ್ಪಡೆಯಾದರೇ ಎಲ್ಲಾ ಕೇಸ್ ಗಳು ಖುಲಾಸೆಯಾಗುತ್ತವೆ. ಮೋದಿ ಪ್ರತಿದಿನ ಯಾರನ್ನಾದರೂ ಕಾರಗೃಹಕ್ಕೆ ಕಳಿಸುತ್ತಿದ್ದಾರೆ. ಬೇರೆ ಪಕ್ಷದಲ್ಲಿದ್ದುಕೊಂಡು ನೀವು ಭ್ರಷ್ಟಾಚಾರ ಮಾಡಬೇಡಿ ಬಿಜೆಪಿಗೆ ಬಂದು ಭ್ರಷ್ಟಾಚಾರ ಮಾಡಿ ಎಂದು ಮೋದಿ ಹೇಳುತ್ತಿದ್ದಾರೆ. ಗುಜರಾತ್ ನಲ್ಲಿ ನಕಲಿ ಮದ್ಯ ಸೇವಿಸಿ ಹಲವು ಜನರು ಮೃತಪಟ್ಟಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. 10 ರಿಂದ 15 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಮನೀಶ್ ಸಿಸೋಡಿಯ ಸತ್ಯೇಂದ್ರ ಜೈನ್ ಭ್ರಷ್ಟಾಚಾರ ಮಾಡಿಲ್ಲ. ಮೋದಿಗೆ ನಿದ್ರೆ ಬರದಿದ್ರೆ ಮಾತ್ರೆ ತೆಗೆದುಕೊಳ್ಳಲಿ . ಪ್ರಧಾನಿ ಮೋದಿ ನಿತ್ಯವೂ ಸಿಟ್ಟಿನಲ್ಲೇ ಇರ್ತಾರೆ ಎಂದು ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


