ಬಿಎಸ್ ಯಡಿಯೂರಪ್ಪರನ್ನ ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ. ಅಮಿತ್ ಶಾ ಅವರು ಪ್ರೀತಿಯಿಂದ ಮಾತನಾಡಿಸಿದ್ರು. ಅಮಿತ್ ಶಾ ನಡೆಯಿಂದ ಆನೆ ಬಲ ಬಂದಂತಾಗಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇನೆ ಎಂದರು.
ಬಿಎಸ್ ವೈ ಹಿಂದಿನಿಂದಲೂ ಉತ್ಸಹದಲ್ಲಿದ್ದಾರೆ . ಬಿಎಸ್ ವೈ ಯಾರ ಜೊತೆ ಮಾತನಾಡಬೇಕೋ ಅವರ ಜೊತೆ ಮಾತನಾಡಿದ್ದಾರೆ. ಬಿಎಸ್ ವೈ ಮತ್ತು ಅಮಿತ್ ಶಾ ಅವರು ನಡುವೆ ರಾಜಕೀಯ ವಿಚಾರ ಚರ್ಚೆಯಾಗಿದೆ. ಈ ಬಾರಿ ಅತಂತ್ರ ಸರ್ಕಾರ ಬರಲು ಬಿಡಲ್ಲ. ಬಿಜೆಪಿ ಸರ್ಕಾರ ಬಹುಮತ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.
ಶಿಕಾರಿಪುರ ಕ್ಷೇತ್ರದಲ್ಲಿ ನಾನು ಓಡಾಡುತ್ತಿದ್ದೇನೆ. ವರುಣಾದಲ್ಲಿ ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ಹೇಳುತ್ತಾರೆ. ಅದನ್ನ ಕೇಂದ್ರದ ನಾಯಕತ್ವ ತೀರ್ಮಾನಿಸಲಿದೆ. ನಾನು ಶಿಕಾರಿಪುರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದೇನೆ. ಮತ್ತೊಂದು ಸುತ್ತು ಪ್ರವಾಸ ಮಾಡುವೆ ಎಂದು ವಿಜಯೇಂದ್ರ ನುಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


