ಬೆಂಗಳೂರು: ಹೆಚ್ಚು ಕಡಿಮೆ 90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೆ ಸಿಗುತ್ತದೆ. ಕೆಲವು ಸಂಧಾನಗಳು ಹಾಗೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಸರಿ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಇನ್ನೂ ಪಟ್ಟಿ ನೋಡಿಲ್ಲ. ಎಲ್ಲಾ ಸರಿ ಹೋಗುತ್ತದೆ. ಕೆಲವು ಕ್ಲಾರಿಫಿಕೇಶನ್‌ಗಳ ನಂತರ ಟಿಕೆಟ್ ಹಂಚಿಕೆ ಆಗುತ್ತದೆ ಎಂದರು.
ಸಿದ್ದರಾಮಯ್ಯ ವರುಣಾದಿಂದ ಟಿಕೆಟ್ ಕೇಳಿದ್ದರು. ಅವರಿಗೆ ವರುಣಾದಿಂದಲೇ ಟಿಕೆಟ್ ಕೊಟ್ಟಿದ್ದಾರೆ. ಅವರು ಕೋಲಾರ ಕೇಳಿದ್ದರೆ ಕೋಲಾರವನ್ನು ಕೊಡುತ್ತಿದ್ದರು. ಮೂರು ನಾಲ್ಕು ದಿನದ ಹಿಂದೆಯೇ ಟಿಕೆಟ್ ಹಂಚಿಕೆ ಆಗಬೇಕಿತ್ತು. ಆದರೆ ಅಮವಾಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತಡವಾಯಿತು. ಅಮವಾಸ್ಯೆಯಂದು ಸೂರ್ಯ ಬಂದಿದ್ದಾನೆ. ಸಿಂಗಲ್ ನೇಮ್ ಇರುವ 124 ಕ್ಷೇತ್ರಗಳ ಹೆಸರು ಕ್ಲಿಯರ್ ಆಗಿದೆ. ಉಳಿದ ಕೆಲವು ಕಡೆ ಸಿಂಗಲ್ ನೇಮ್ ಇದ್ದರೂ, ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


