ಬೆಂಗಳೂರು: ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಶಾ ಭದ್ರತೆಯಲ್ಲಿ ವೈಫಲ್ಯ ಉಂಟಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಅಮಿತ್ ಶಾ ಪ್ರಯಾಣಿಸುತ್ತಿದ್ದಾಗ ಅವರ ಭದ್ರತಾ ವಾಹನಗಳನ್ನು 2 ಬೈಕರ್ಸ್‌ಗಳು ಬೆನ್ನಟ್ಟಿದ್ದಾರೆ.
ಭಾನುವಾರ ತಡರಾತ್ರಿ 11 ಗಂಟೆ ಬಿಜೆಪಿ ಕೋರ್ ಸಮಿತಿಯ ಸಭೆ ನಡೆಸಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಿಂದ ಹೆಚ್‌ಎಎಲ್‌ಗೆ ಅಮಿತ್ ಶಾ ತೆರಳುತ್ತಿದ್ದಾಗ ಶಫಿನ್ ಫ್ಲಾಜಾದಿಂದ ಮಣಿಪಾಲ್ ಸೆಂಟರ್ ವರೆಗೆ ಅವರ ಭದ್ರತಾ ವಾಹನಗಳ ಹಿಂದೆ 2 ಬೈಕ್‌ಗಳು ಬಂದಿವೆ. ಸುಮಾರು 300 ಮೀ. ವರೆಗೆ ಬೈಕರ್ಸ್‌ಗಳು ಭದ್ರತಾ ವಾಹನಗಳ ಜೊತೆಯೇ ಬಂದಿದ್ದಾರೆ.
ಇಬ್ಬರು ಬೈಕರ್ಸ್‌ಗಳು ಏಕಾಏಕಿ ಭದ್ರತಾ ವಾಹನಗಳ ಹಿಂದಿನಿಂದ ಬಂದಿದ್ದು, ಸ್ವಲ್ಪ ದೂರದವರೆಗೆ ಬೆನ್ನಟ್ಟಿದ್ದಾರೆ. ತಕ್ಷಣವೇ ಭಾರತೀನಗರದ ಪೊಲೀಸರು ಬೈಕ್‌ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರಿಬ್ಬರೂ ವಿದ್ಯಾರ್ಥಿಗಳು ಎಂಬುದು ತಿಳಿದು ಬಂದಿದ್ದು ಇಬ್ಬರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


