ಹೆಚ್.ಡಿ.ಕೋಟೆ: ಹೆಚ್.ಡಿ. ಕೋಟೆ ಆಡಳಿತ ಸೌಧ ಕಾರ್ಯಲಯದಲ್ಲಿ ವಿಧಾನಸಭಾ ಸದಸ್ಯರ ಬೋರ್ಡ್ ತೆರವು ಗೊಳಿಸದ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ನಡೆದಿದೆ.
ಆಡಳಿತ ಸೌಧದ ಕೊಠಡಿ ಒಂದರ ಮುಂದೆ ಶಾಸಕ ಅನಿಲ್ ಚಿಕ್ಕಮಾದು ಹೆಸರು ರಾರಾಜಿಸುತ್ತಿದ್ದ ದೃಶ್ಯ ಕಂಡು ಬಂದಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣದಲ್ಲಿ ಅಧಿಕಾರಿಗಳು ಬೋರ್ಡ್ ತೆರವುಗೊಳಿಸಬೇಕಿತ್ತು. ಆದರೆ, ತಾಲೂಕು ಆಡಳಿತ ಸಿಬ್ಬಂದಿ ವರ್ಗವು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.
ಮಾರ್ಚ್ 29ರಂದು ನೀತಿ ಸಂಹಿತೆ ಜಾರಿಯಾಗಿತ್ತು. ಆದರೆ ಮಾರ್ಚ್ 30 ಆದರೂ ಅಧಿಕಾರಿಗಳು ಬೋರ್ಡ್ ತೆರವುಗೊಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಬೋರ್ಡ್ ತೆರವುಗೊಳಿಸದೇ ಇಲ್ಲಿನ ತಹಶೀಲ್ದಾರ್ ಮಹೇಶ್ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


