ಬಿಟಿಎಂ ಬಡವಣೆಯಲ್ಲಿ ಶ್ರೀರಾಮ್ ನವಮಿಯನ್ನು ಸಂಭ್ರಮ ಮತ್ತು ಶುದ್ಧ ಭಕ್ತಿಯಿಂದ ಆಚರಣೆ ಮಾಡಲಾಯಿತು.
ರಾಮನವಮಿ ಪ್ರಯುಕ್ತ ಅಲ್ಲಲ್ಲಿ ಅರವಂಟಿಕೆ ಸ್ಥಾಪನೆ ಮಾಡಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ ಕೋಸಂಬರಿ ಹಾಗೂ ಪಾನಕ ವಿತರಸಲಾಯಿತು.
ಬಿಟಿಎಂ ಲೇಔಟ್ ನಲ್ಲಿ ಶ್ರೀ ಗುರು ರಾಘವೇಂದ್ರ ಆಶ್ರಯ ಫೌಂಡೇಶನ್ ವತಿಯಿಂದ ಭಕ್ತರಿಗೆ ವಿಶೇಷ ರೀತಿಯಲ್ಲಿ ಅನ್ನದಾನ ವಿತರಣೆ ಮಾಡಲಾಯಿತು.
ಜಾತಿ ಧರ್ಮ ಬಿಟ್ಟು ಸರ್ವರೂ ಬಂದು ಮಜ್ಜಿಗೆ, ಪಾನಕ, ಕೋಸಂಬರಿ ತೆಗೆದುಕೊಂಡು ಹೋದರು.
ಈ ಹಬ್ಬಕ್ಕೆ ವಿಶೇಷ ಏನೆಂದರೆ ಬೇಸಿಗೆಯಲ್ಲಿ ಜನ ಕುಡಿಯುವ ನೀರಿಗಾಗಿ ಪರದಾಟ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀರಾಮ್ ನವಮಿ ಹಬ್ಬದ ಹೆಸರಲ್ಲಿ ದಣಿದವರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಕೊಟ್ಟು ಅವರ ದಣಿವನ್ನು ನೀಗಿಸುವುದು.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


