ನಿನ್ನೆ ಬಂದ ಸರ್ವೇ ಪ್ರಕಾರ ಬಿಜೆಪಿ 60 ಸ್ಥಾನವನ್ನೂ ಗೆಲ್ಲಲ್ಲ. ಬಿಜೆಪಿ ಧೂಳಿಪಟ ಆಗುವುದನ್ನ ತಡೆಯುವ ಯೋಚನೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಕೃಷ್ಣ ಭೈರೇಗೌಡ ಟಾಂಗ್ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕೃಷ್ಣ ಬೈರೇಗೌಡ, ಬಿಜೆಪಿಯವರಿಗೆ ಮಾರಿಹಬ್ಬ ಮಾಡಬೇಕೆಂದು ಜನ ಕಾಯುತ್ತಿದ್ದಾರೆ. ಹಾಗಾಗಿ ಬಿಎಸ್ ಯಡಿಯೂರಪ್ಪ ತಮ್ಮ ಸ್ಥಾನ ಉಳಿಸಿಕೊಳ್ಳಲಿ. ಬಿಜೆಪಿಯು ಬಿಎಸ್ ಯಡಿಯೂರಪ್ಪರನ್ನ ಮೂಲೆಗುಂಪು ಮಾಡಿದೆ.
ಎಲ್. ಕೆ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ಪರಿಸ್ಥಿತಿಯೇ ಬಿಎಸ್ ವೈಗೆ ಬಂದಿದೆ. ಅಡ್ವಾಣಿ, ವಾಜಪೇಯಿ ದೇಶದ ಮೂಲೆ ಮೂಲೆ ಸುತ್ತಿ ಪಕ್ಷವನ್ನು ಕಟ್ಟಿದ್ರು. ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದರು.
ಹಾಗೆಯೇ ಎಸ್ ಎಂ ಕೃಷ್ಣ ಅವರಿಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ನೀಡಿದ್ದವು ಆದರೆ ಬಿಜೆಪಿ ಅವರನ್ನು ಕರೆದುಕೊಂಡು ಹೋಗಿ ಮೂಲೆಗುಂಪು ಮಾಡಿದೆ ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


