ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ಶ್ರೀ ರಾಮ ನವಮಿಯನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಎಲ್ಲೆಡೆ ಆಚರಣೆ ಮಾಡಲಾಯಿತು.ರಾಮನವಮಿ ಪ್ರಯುಕ್ತ ಅಲ್ಲಲ್ಲಿ ಅರವಂಟಿಕೆ ಸ್ಥಾಪನೆ ಮಾಡಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ಬಿಟಿಎಂ ಲೇಔಟ್ ನಲ್ಲಿ ಶ್ರೀ ಗುರು ರಾಘವೇಂದ್ರ ಆಶ್ರಯ ಫೌಂಡೇಶನ್ ವತಿಯಿಂದ ಭಕ್ತರಿಗೆ ವಿಶೇಷ ರೀತಿಯಲ್ಲಿ ಅನ್ನದಾನ, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡಲಾಯಿತು.
ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಮಜ್ಜಿಗೆ ಪಾನಕ, ಕೋಸಂಬರಿ ಸ್ವೀಕರಿಸುವ ಮೂಲಕ ಸೌಹಾರ್ದಯುತ ರಾಮನವಮಿಯನ್ನು ಆಚರಿಸಲಾಯಿತು.ಬೇಸಿಗೆಯ ಬಿಸಿಯಲ್ಲಿ ದಣಿದ ಸಾರ್ವಜನಿಕರು ರಾಮನವಮಿಯ ಈ ವಿಶೇಷ ಸಂದರ್ಭದಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಸೇವಿಸುವ ಮೂಲಕ ದಣಿವು ನೀಗಿಸಿಕೊಂಡರು.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


