ತುಮಕೂರು: ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಅದರಲ್ಲೂ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಸಂಚಾರ ನಡೆಸಿದ್ದಾರೆ ಅದರಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಿರಂತರವಾಗಿ ಕಳೆದು ಒಂದು ವರ್ಷದಿಂದ ಜನರೊಂದಿಗೆ ಸ್ಥಳೀಯ ಕಾರ್ಯಕ್ರಮಗಳೊಂದಿಗೆ ಬರೆಯುತ್ತಿದ್ದಾರೆ.
ಅದರಲ್ಲೂ ಅವರಿಗೆ ಟಿಕೇಟು ಘೋಷಣೆಯಾದ ನಂತರ ಸಂಪೂರ್ಣವಾಗಿ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿರುವ ಪರಮೇಶ್ವರ್ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಿಡುವಿಲ್ಲದ ಪ್ರಚಾರದ ಸಮಯದ ನಡುವೆ ಗ್ರಾಮಸ್ಥರೊಂದಿಗೆ ಭರ್ಜರಿಯಾಗಿ ಡಾನ್ಸ್ ಮಾಡಿದ್ದಾರೆ.
ಇದು ಕೊರಟಗೆರೆ ವಿಧಾನಸಭಾ ಕ್ಷೇತ್ರದಾದ್ಯಂತ ಸಾಕಷ್ಟು ವೈರಲ್ ಆಗುತ್ತಿದೆಕೊರಟಗೆರೆ ತಾಲೂಕಿನ ಚಿಕ್ಕಣ್ಣನಹಳ್ಳಿ ಗ್ರಾಮದ ಜನರೊಂದಿಗೆ ಉರುಮೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಸಜ್ಜನ ವೈಟ್ ಕಾಲರ್ ರಾಜಕಾರಣಿ ಎಂಬ ಖ್ಯಾತಿಯ ಪರಮೇಶ್ವರ್ ಉರುಮೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ನಾನು ಹೈಟೆಕ್ ಲೈಫ್ ಸ್ಟೈಲ್ಗೂ ಸೈ, ಜನಸಾಮಾನ್ಯರ ಜೊತೆಯಾಗಿ ಲೋಕಲ್ ಡಾನ್ಸ್ ಗೂ ಸೈ ಅನ್ನೋದನ್ನ ತೋರಿಸಿದ್ದಾರೆ.
ಇನ್ನು ಚಿಕ್ಕನಹಳ್ಳಿ ಗ್ರಾಮಸ್ಥರು ಡಾಕ್ಟರ್ ಜಿ ಪರಮೇಶ್ವರ್ ಹೆಜ್ಜೆ ಹಾಕೋದನ್ನ ನೋಡಿ ತಾವು ಕೂಡ ಅವರೊಂದಿಗೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
ಇನ್ನೂ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಹುತೇಕ ಸಜ್ಜಾಗಿರುವ ಸುಧಾಕರ್ ಲಾಲ್ ಕೂಡ ಸದ್ದಿಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರು ಕೂಡ ಸ್ಥಳೀಯವಾಗಿ ಜನರೊಂದಿಗೆ ಮುಖಾಮುಖಿ ಭೇಟಿಯಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ ಯಾವುದೇ ರೀತಿಯ ಪ್ರಚಾರವನ್ನು ಬಯಸದೆ ನೇರವಾಗಿ ಸಂಪರ್ಕ ಇರಿಸಿಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ, ಸೋಂಪುರ ಗ್ರಾಮದಲ್ಲಿ ನಡೆದ 3 ನೇ ವರ್ಷದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಹಾಗೂ ಬೆಳ್ಳಿರಥದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬೆಂಬಲಿಗರು ಸುಧಾಕರ್ ಲಾಲ್ ಬರುತ್ತಿದ್ದಂತೆ ಅವರನ್ನು ಹೊತ್ತು ಕುಣಿದರು.
ಕಾರ್ಯಕ್ರಮದಲ್ಲಿ ಯಜಮಾನ್ ವೆಂಕಟೇಶ್ ರವರು, ಯಜಮಾನ್ ನಾರಾಯಣಪ್ಪ ರವರು, ಹಾಗೂ ಅಗ್ನಿವಂಶ ಕ್ಷತ್ರಿಯ ಸಂಘದ ಸದಸ್ಯರು, ಯುವಕರು, ಜೆಡಿಎಸ್ ಮುಖಂಡರಿದ್ದರು.
ಇನ್ನೊಂದೆಡೆ ನಿವೃತ್ತ ಐಪಿಎಸ್ ಅಧಿಕಾರಿ ಅನಿಲ್ ಕುಮಾರ್ ಕೂಡ ಈಗಾಗಲೇ ತಮಗೆ ಬಿಜೆಪಿ ಟಿಕೆಟ್ ಲಭಿಸಲಿದೆ ಎಂದು ಭಾವಿಸಿ ಹಾಗೂ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA