ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರ ದಲ್ಲಿ ಬಿಜೆಪಿ ಹಾಗೂ ಮುತಾಲಿಕ್ ನಡುವೆ ವಾರ್ ಶುರುವಾಗಿದೆ. ಚುನಾವಣೆ ಘೋಷಣೆಗೆ ಮುನ್ನ ಆರೋಪಗಳ ಸುರಿಮಳೆ ಮಾಡುತ್ತಿದ್ದ ಮುತಾಲಿಕ್‍ಗೆ ಬಿಜೆಪಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಸುನಿಲ್ ಕುಮಾರ್ ಗೆ ಮತ ಹಾಕಿ ಮುಟ್ಟಾಳ ರಾಗಬೇಡಿ ಎಂಬ ಮುತಾಲಿಕ್ ಪೋಸ್ಟರ್ ವಿರುದ್ಧ ಕಮಲ ಪಡೆ ತಿರುಗಿಬಿದ್ದಿದೆ.
ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ. ಹೀಗಂತಾ ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ.
ನೂರಾರು ಜನ ಮುತಾಲಿಕ್ ಪೋಸ್ಟರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಮತದಾರರಿಗೆ ಅವಮಾನವಾಯ್ತು. ಇದರ ಫಲ ನೀವು ಫಲಿತಾಂಶದ ದಿನ ಅನುಭವಿಸ್ತೀರಿ. ಯಾರದ್ದೊ ಕುಮ್ಮಕ್ಕಿನಿಂದ ಯಾರದ್ದೋ ದುಡ್ಡು ತೆಗೆದುಕೊಂಡು ಎಲ್ಲಿಂದಲೋ ಕಾರ್ಕಳಕ್ಕೆ ಬಂದಿದ್ದೀರಿ. ಈ ಬಾರಿ ಕಾರ್ಕಳದಲ್ಲಿ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


