ಬಿಜೆಪಿ ಪಕ್ಷಕ್ಕೆ ಬಂಡಾಯ ಮತ್ತು ಬಣರಾಜಕಾರಣ ಬಳುವಳಿಯಾಗಿ ಬಂದಂತೆ ಕಾಣಿಸುತ್ತಿದೆ. ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕಾರಣ ವ್ಯಕ್ತಿ ಪ್ರತಿಷ್ಠೆ ತಾರಕ್ಕೆರಿದೆ ಇದರಿಂದಾಗಿ ಪಕ್ಷದ ವರಿಷ್ಠರು ಹಾಗೂ ಹೈಕಮಾಂಡ್ ಇದನ್ನು ಶಮನಗೊಳಿಸಲು ಮುಂದಾಗಿದ್ದಾರೆ.
ಕೇಂದ್ರ ಸಚಿವರಾದ ಪ್ರಲಾದ್ ಜೋಶಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಇಂದು ಸಂಕಂ ಹೋಟೆಲ್ ರಲ್ಲಿ ಕೋರ್ ಕಮಿಟಿ ಸಭೆ ಜರುಗಿತು. ಈ ಸಭೆಯಲ್ಲಿ ಸ್ಪಷ್ಟವಾದ ನಿರ್ಣಯ ಒಂದು ಬೇರೆಯವರ ಕ್ಷೇತ್ರದಲ್ಲಿ ಹತ್ತಕ್ಷೇಪ ಮಾಡಬಾರದೆಂದು ನೇರವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ 18 ಕ್ಷೇತ್ರದಲ್ಲಿ ಚುನಾವಣೆ ನೇತೃತ್ವ ನಡಿಯಬೇಕು ,ನಮ್ಮ ಬೆಂಬಲಗರಿಗೆ ಟಿಕೆಟ್ ನೀಡಬೇಕು ಈ 18 ಕ್ಷೇತ್ರಗಳನ್ನು ನಾನು ವಿಜಯಶಾಲಿಯಾಗಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹಠ ಹಿಡಿದಿದ್ದಾರೆ.
ಮೊದಲು ನಿಪ್ಪಾಣಿ ಮತಕ್ಷೇತ್ರ, ಬೆಳಗಾವಿ ದಕ್ಷಿಣ ಮತಕ್ಷೇತ್ರ, ಬೆಳಗಾವಿ ಗ್ರಾಮೀಣ ಮತಕ್ಷೇತ್ರ, ಹಾಗೂ ಅಥಣಿ ಕ್ಷೇತ್ರಗಳಲ್ಲಿ, ತಮ್ಮ ಕಟ್ಟಾ ಬೆಂಬಲಿಗರಿಗೆ ಬಿ ಫಾರಂ ಕೊಡಿಸುವ ಪ್ರಯತ್ನದಲ್ಲಿದ್ದಾರೆ ಆದರೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿ ಕೇಂದ್ರ ನೇತೃತ್ವ ರಮೇಶ್ ಜಾರಕಿಹೊಳಿಯವರನ್ನ ರಾಜಕೀಯ ವಾಗಿ ಕಟ್ಟಿ ಹಾಕುವ ರಣತಂತ್ರ ತಯಾರಿಸಿದಂತೆ ಕಂಡು ಬರುತ್ತಿದೆ.
ಈ ಕಡೆ ಬಂಡಾಯದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅರಭಾವಿ ಮತಕ್ಷೇತ್ರಕ್ಕೆ ಪಂಚಮಸಾಲಿ ಹಾಗೂ ಲಿಂಗಾಯತ ಮತಗಳು ಹೆಚ್ಚಿರುವುದರಿಂದ ಅಲ್ಲಿ ಲಿಂಗಾಯತ ಅಭ್ಯರ್ಥಿ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದು ಕೂಡ ರಮೇಶ್ ಜಾರಕಿಹೊಳಿ ಅವರಿಗೆ ಕೋಪ ನೆತ್ತಿಗೇರಿಸಿದೆ ಇದರಿಂದ ಭಾರತೀಯ ಜನತಾ ಪಕ್ಷಕ್ಕೆ ಬೆಳಗಾವಿ ರಾಜಕಾರಣ ನುಂಗಲಾರದ ಬಿಸಿತುಪ್ಪಾಗಿ ಪರಿಗಣಮಿಸಿದೆ.
ಇದು ಜಾರಕಿಹೊಳಿಯವರ ಸಮಸ್ಯೆ ಆದರೆ ಇನ್ನೊಂದು ಕಡೆ ಎಲ್ಲಾ ಕ್ಷೇತ್ರಗಳಲ್ಲಿ ಎರಡು-ಮೂರು ಪ್ರಬಲ ಟಿಕೆಟ್ ಆಕಾಂಕ್ಷಿಗಳು ವರಿಷ್ಠಗಳ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಈ ಎಲ್ಲಾ ಬೆಳವಣಿಗೆ ಭಾರತೀಯ ಜನತಾ ಪಕ್ಷಕ್ಕೆ ಶುಭ ಸೂಚನೆ ಮಾತ್ರ ಆಗದು ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


