ನವದೆಹಲಿ: ಭಾರತೀಯ ಕಂಪನಿಯಿಂದ ತಯಾರಿಸಲ್ಪಟ್ಟ ಐಡ್ರಾಪ್‌ಗಳನ್ನು ಯುಎಸ್‌ಎ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಈ ಐಡ್ರಾಪ್ಸ್ ನಿಂದ ಹಲವು ಜನರಲ್ಲಿ ಸೋಂಕು ಹರಡುತ್ತಿದೆ ಎಂದು ಯುಎಸ್‌ಎ ವರದಿ ಮಾಡಿದೆ .
ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಎಂಬ ಬ್ರಾಂಡ್‌ನಲ್ಲಿ ತಯಾರಿಸಿದ ಐಡ್ರಾಪ್ಸ್ ನಿಂದ ಮೂರು ಸಾವು, ಎಂಟು ಕುರುಡುತನ ಮತ್ತು ಹಲವರಲ್ಲಿ ಸೋಂಕುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಕಲುಷಿತ ಕೃತಕ ಐಡ್ರಾಪ್ಸ್ ಬಳಕೆಯಿಂದ ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಫೆಬ್ರವರಿಯಲ್ಲಿ ಯುಎಸ್ ಮಾರುಕಟ್ಟೆಗೆ ಲಿಂಕ್ ಮಾಡಿದ ಐಡ್ರಾಪ್‌ಗಳ ಉತ್ಪಾದನೆಯನ್ನು ನಿಲ್ಲಿಸಿತ್ತು. ಇದು ಗ್ರಾಹಕರ ಮಟ್ಟದಲ್ಲಿ ಅವಧಿ ಮೀರಿದ ಕೃತಕ ಐಡ್ರಾಪ್ ಗಳನ್ನುಸ್ವಯಂಪ್ರೇರಣೆಯಿಂದ ಹಿಂಪಡೆದಿದೆ ಎಂದು ಹೇಳಿದೆ.
ಅದ್ದರಿಂದ ಇಂತಹ ಐಡ್ರಾಪ್‌ಗಳಿಂದ ಸೋಂಕುಗಳು ಪತ್ತೆಯಾದರೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


