ತುರುವೇಕೆರೆ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಹಲವಾರು ಮುಖಂಡರುಗಳು ಹಾಗೂ ಕಾರ್ಯಕರ್ತರು ಮುಖಂಡರಾದ ಎಚ್.ಆರ್. ರಾಮೇಗೌಡ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಹೆಚ್.ಆರ್.ರಾಮೇಗೌಡ ರವರ ಸ್ನೇಹಿತರಾದ ರೇಣುಕೇಶ್, ಯದು,ದಿವಾಕರ್,ಶೇಕರ್ ಮತ್ತು ಬೆಂಬಲಿಗರು ತುರುವೇಕೆರೆ ಪಟ್ಟಣದ ಆರಾಧ್ಯ ದೇವತೆ ಉಡುಸಲಮ್ಮ ದೇವಿಗೆ ಪೂಜೆಯನ್ನು ಸಲ್ಲಿಸಿ ದೇವಿ ಆಶೀರ್ವಾದವನ್ನು ಪಡೆದು ಜೆ.ಡಿ.ಎಸ್. ಮುಖಂಡರುಗಳಾದ ಬಾಣ ಸಂದ್ರ ರಮೇಶ್,ಹೇಡಗೀಹಳ್ಳಿ ವಿಶ್ವನಾಥ್ ರವರ ಜೊತೆಗೂಡಿ ಬಾಣಸಂದ್ರ ರಸ್ತೆಯ ಮೂಲಕ ಜೆ ಡಿ ಎಸ್ ಪಕ್ಷ ಮತ್ತು ಕೃಷ್ಣಪ್ಪ ರವರ ಪರ ಘೋಷಣೆಗಳನ್ನು ಕೂಗುತ್ತಾ ದಬ್ಬೇಘಟ್ಟ ರಸ್ತೆಯಲ್ಲಿರುವ ಜೆ ಡಿ ಎಸ್ ಕಚೇರಿಗೆ ಆಗಮಿಸಿದರು.
ಆಗಮಿಸಿದ ತಕ್ಷಣ ಪಕ್ಷದ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿ ಪಕ್ಷದ ಪರ ಮತ್ತು ತಮ್ಮ ನಾಯಕರುಗಳ ಪರ ಘೋಷಣೆಗಳನ್ನು ಕೂಗಿದರು ನಂತರ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪರವರು ಮೆರವಣಿಗೆ ಮೂಲಕ ಸಾಗಿ ಬಂದ ಮುಖಂಡರು ಹಾಗೂ ಕಾರ್ಯಕರ್ತರುಗಳನ್ನು ಪಕ್ಷದ ಶಾಲು ಮತ್ತು ಹಾರ ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರು ಮಾತನಾಡಿ ಕಳೆದ ಐದು ವರ್ಷಗಳಿಂದ ಇದ್ದ ಶಾಸಕರ ಅಭಿವೃದ್ಧಿ ಶೂನ್ಯ ಸಾಧನೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಲ್ಲಿ ಕೆಲಸ ಕೇಳದ 40% ಕಮಿಷನ್ ಗಿರಾಕಿಯಾಗಿದ್ದು ಇದರಿಂದ ಬೇಸತ್ತು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಮುಂದಿನ ದಿನಗಳಲ್ಲಿ ನಾನು ಇವರುಗಳ ಜೊತೆ ಸಕ್ರಿಯವಾಗಿ ಒಡನಾಟದಿಂದ ಯಾವ ಲೋಪವೂ ಬರದಂತೆ ನೋಡಿಕೊಳ್ಳುತ್ತೇನೆ ಮನಸ್ಸಿಗೂ ನೋವಾಗದಂತೆ ಅಧಿಕಾರವನ್ನು ನಡೆಸುತ್ತೇನೆ ಎಂದರು.
ನಂತರ ಮುಖಂಡರಾದ ಹೆಚ್ ಆರ್ ರಾಮೇಗೌಡರವರು ಮಾತನಾಡಿ ನಾನು ಜೆ ಡಿ ಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಮಾಜಿ ಶಾಸಕರ ಆಡಳಿತ ವೈಕರಿ ಪಾರದರ್ಶಕ ಶಾಸಕತ್ವವನ್ನು ಮೆಚ್ಚಿ ಈ ದಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸೇರ್ಪಡೆಗೊಳ್ಳುತ್ತಿದ್ದೇವೆ ನಾವೆಲ್ಲರೂ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡು ಈ ಬಾರಿ ಎಂ ಟಿ ಕೃಷ್ಣಪ್ಪನವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಮಾಡಿ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿ ಸೇರ್ಪಡೆಗೊಂಡಿದ್ದೇವೆ ನಮ್ಮ ಗುರಿ ಒಂದೇ ಎಂ ಟಿ ಕೃಷ್ಣಪ್ಪರವರನ್ನ ಗೆಲ್ಲಿಸುವುದು ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ನಂತರ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆ ಡಿ ಎಸ್ ಪಕ್ಷ ಸೇರಿಕೊಂಡ ಪಟ್ಟಣದ ಮುಖಂಡರಾದ ಮಹೇಶ್ ಮಾತನಾಡಿ ಕೃಷ್ಣಪ್ಪನವರ ಆಡಳಿತ ವೈಕರಿ ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳಿಂದ ಸಾಮಾನ್ಯ ಜನರಿಗೆ ಕೆಲಸ ಮಾಡಿಸಿಕೊಡುವ ವ್ಯಕ್ತಿತ್ವ ದಕ್ಷ ಆಡಳಿತವನ್ನು ಒಪ್ಪಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪಕ್ಷ ಸೇರ್ಪಡೆಯನ್ನು ಆಗುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಸ್ವಾಮಿ ,ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶ್ ,ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ದಿವಾಕರ್ ,ಕಣತ್ತೂರು ಪ್ರಸನ್ನ , ದೇವೇಗೌಡ ಬಡಾವಣೆಯ ಶಿವರಾಜ್ ,ತಾವರೆಕೆರೆ ತಿಮ್ಮೇಗೌಡ , ಪರಮೇಶ್, ಮುನಿಯೂರು ಮಂಜುನಾಥ್ ದಿಲೀಪ್ ಮುಂತಾದವರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA