ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ಪ್ರಿಯಕರನ ಸಹೋದರನನ್ನು ಕಟ್ಟಿಹಾಕಿ ಸಜೀವ ದಹನ ಮಾಡಲಾಗಿದೆ. ಕಾರಿನೊಳಗೆ ಕಟ್ಟಿಹಾಕಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಾಗರಾಜು ಅವರನ್ನು ಮಹಿಳೆಯ ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನ ಕಿರಿಯ ಸಹೋದರ ಪುರುಷೋತ್ತಮ್ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ಸಂಬಂಧಕ್ಕೆ ಹುಡುಗಿಯ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು.
ವಿಷಯ ಬಗೆಹರಿಸುವ ನೆಪದಲ್ಲಿ ಸಂಬಂಧಿಕರು ನಾಗರಾಜು ಅವರನ್ನು ಕರೆಸಿದ್ದರು.ನಾಗರಾಜು ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಸಂಬಂಧಿಕರು ಥಳಿಸಿ, ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಕಾರನ್ನು ಕಮರಿಗೆ ತಳ್ಳಲು ಯತ್ನಿಸಿದರಾದರೂ ಕಲ್ಲಿನಿಂದ ತಡೆದ ಕಾರಣ ಪ್ರಯತ್ನ ವಿಫಲವಾಯಿತು. ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವಕರನ್ನು ಹೊರತೆಗೆದಿದ್ದಾರೆ. ಆದರೆ ತೀವ್ರ ಸುಟ್ಟಗಾಯಗಳಿಂದ ನಾಗರಾಜು ಸಾವನ್ನಪ್ಪಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


