ಮನೆಯಲ್ಲಿ ಮಾಡಿದ ಚಿಕನ್ ತಿನ್ನಲು ಬಿಡಲಿಲ್ಲ ಎಂಬ ಜಗಳದ ನಂತರ ತಂದೆ ತನ್ನ ಮಗನನ್ನು ಕೊಂದಿದ್ದಾನೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗೇರಿಯಲ್ಲಿ ಈ ಘಟನೆ ನಡೆದಿದೆ.
32 ವರ್ಷದ ಶಿವರಾಮ್ ಮಂಗಳವಾರ ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಅಂದು ಶಿವರಾಂ ಬರುವ ಮೊದಲೇ ಮಾಡಿದ ಚಿಕನ್ ಕರಿ ತಿಂದು ಮುಗಿಸಿದ್ದರು. ಶಿವರಾಂ ಅವರಿಗೆ ಚಿಕನ್ ಕರಿ ಬಡಿಸದಿದ್ದಕ್ಕೆ ಮಾತಿನ ಚಕಮಕಿ ಆರಂಭವಾಯಿತು. ಆಗ ತಂದೆ ಮರದ ತುಂಡಿನಿಂದ ಮಗನ ತಲೆಗೆ ಹೊಡೆದಿದ್ದಾನೆ. ಆಗ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಘಟನೆಗೆ ಸಂಭಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಶಿವರಾಂ ತಂದೆಯನ್ನು ಬಂಧಿಸಿದ್ದಾರೆ. ಶಿವರಾಮ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


