ನಾಣ್ಯಗಳಂತಹ ವಸ್ತುಗಳನ್ನು ಅರಿವಿಲ್ಲದೆ ನುಂಗುವ ಘಟನೆಗಳನ್ನು ನೀವು ಕೇಳಿರಬಹುದು. ಆದರೆ ಇದೀಗ ಯುವತಿಯೊಬ್ಬಳು ಮೊಬೈಲ್ ನುಂಗಿರುವ ಅಸಾಮಾನ್ಯ ಪ್ರಕರಣ ಮಧ್ಯಪ್ರದೇಶದಿಂದ ಹೊರ ಬಿದ್ದಿದೆ.
2 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ಅಂತಿಮವಾಗಿ ಫೋನ್ ಅನ್ನು ಯುವತಿಯ ಹೊಟ್ಟೆಯಿಂದ ತೆಗೆಯಲಾಯಿತು.
18 ವರ್ಷದ ಯುವತಿ ತನ್ನ ಸಹೋದರನೊಂದಿಗೆ ಜಗಳವಾಡಿದ ನಂತರ ತನ್ನ ಮೊಬೈಲ್ ಫೋನ್ ಅನ್ನು ನುಂಗಿದ್ದಾಳೆ. ಫೋನ್ ನುಂಗಿದ ತಕ್ಷಣ ಯುವತಿಗೆ ವಿಪರೀತ ನೋವು ಶುರುವಾಯಿತು.
ಕೂಡಲೇ ಸಂಬಂಧಿಕರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಸ್ಥಿತಿ ಹದಗೆಟ್ಟಾಗ ಅವರನ್ನು ಗ್ವಾಲಿಯರ್‌ಗೆ ಕಳುಹಿಸಲಾಯಿತು. ಮೊಬೈಲ್ ಫೋನ್ ಪತ್ತೆ ಮಾಡಲು ಯುವತಿಯನ್ನು ಅಲ್ಟ್ರಾಸೌಂಡ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು.
ಗ್ವಾಲಿಯರ್‌ನ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಎಚ್‌ಒಡಿ ಡಾ.ಪ್ರಶಾಂತ್ ಶ್ರೀವಾಸ್ತವ ನೇತೃತ್ವದ ವೈದ್ಯರ ತಂಡ ಆಪರೇಷನ್ ಮಾಡಿ ಆಕೆಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆದಿದ್ದಾರೆ. ಈಗ ಅವಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಗಂಟಲಿನ ಮೂಲಕ ಇಷ್ಟು ದೊಡ್ಡ ವಸ್ತು ಹೊಟ್ಟೆ ಸೇರಿರುವುದು ಇದೇ ಮೊದಲು ಎಂದು ಡಾ. ಧಕದ್ ಪ್ರತಿಕ್ರಿಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


