ಹಿಮಾಚಲ ಪ್ರದೇಶದ ಸ್ಪಿತಿ ಜಿಲ್ಲೆಯ ಕೀಲಾಂಗ್ ಪಂಚಾಯತ್ ಹಬ್ಬಗಳು ಮತ್ತು ಮದುವೆ ಸಮಾರಂಭಗಳಲ್ಲಿ ಬಿಯರ್ ನೀಡುವುದನ್ನು ನಿಷೇಧಿಸಿದೆ.
ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಹಬ್ಬ, ಮದುವೆ ಸಮಾರಂಭಗಳಲ್ಲಿ ಬಿಯರ್ ನೀಡುವುದನ್ನು ನಿಲ್ಲಿಸಲು ಭಾನುವಾರ ನಡೆದ ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸೋನಮ್ ಸಾಂಗ್ಪೋ ತಿಳಿಸಿದ್ದಾರೆ.
ಮದುವೆ ಮತ್ತು ಇತರ ಆಚರಣೆಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬೆರೆಸುವುದನ್ನು ತಡೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪರಿಷತ್ ಸದಸ್ಯ ಕುಂಗ ಬೋಧ್ ಪ್ರತಿಕ್ರಿಯಿಸಿ, ಯುವಜನತೆಯೂ ಸಂಸ್ಕೃತಿ, ಸಂಪ್ರದಾಯ ಉಳಿಸುವ ಕಾಳಜಿ ಹೊಂದಿದ್ದು, ಈ ಬಗ್ಗೆ ಶೀಘ್ರವೇ ಸರ್ವಾನುಮತದ ನಿರ್ಣಯ ನಿರೀಕ್ಷಿಸಲಾಗಿದೆ. ಈ ಹಿಂದೆ, ಕಿನ್ನೌರ್ ಜಿಲ್ಲೆಯ ಹ್ಯಾಂಗ್ರಾಂಗ್ ಕಣಿವೆಯ ಸುಮಾರಾ ಪಂಚಾಯತ್ ಮದುವೆಗಳಲ್ಲಿ ಬುಡಕಟ್ಟು ಸಂಪ್ರದಾಯಗಳನ್ನು ಎತ್ತಿಹಿಡಿಯಲು ಮತ್ತು ಬಾಲಿವುಡ್ ಶೈಲಿಯ ಅದ್ದೂರಿ ವಿವಾಹಗಳನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


