ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹಲವು ರಾಜ್ಯದ ಮಾದರಿಗಳನ್ನು ಕರ್ನಾಟಕದ ಮುಂದಿಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಮಲ ಪಡೆ 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.
ಇತ್ತಕಡೆ ಹೊಸಬರ ಪಾದಾರ್ಪಣೆಯಾಗುತ್ತಿದ್ದಂತೆ ಹಲವು ಮಾಜಿ ಅಭ್ಯರ್ಥಿಗಳು ಕಣ್ಣೀರಿಟ್ಟರೆ ಇನ್ನು ಹಲವರು ಬಂಡಾಯದ ಮುನ್ಸುಚನೆಯ ಮಾತಗಳನ್ನಾಡಿದ್ದಾರೆ ಇದರ ಮದ್ಯೆಯೆ ಕಾಂಗ್ರೆಸ್ ಇನ್ನು ಹಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೂರನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದ್ದು ಬಿಜೆಪಿಯ ಹಲವರು ಕಾಂಗ್ರೆಸ್ ಕಡೆಗೆ ಜಾರಿದರೆ ಎಂಬ ತಲೆನೋವು ಕೂಡ ಬಿಜೆಪಿಗೆ ಶುರುವಾಗಿದೆ.
ಮೊದಲ ಪಟ್ಟಿ ಬಿಡುಗಡೆಯಾದ ಕೆಲವ ಗಂಟೆಗಳಲ್ಲಿ ಬಂಡಾಯದ ಬೀತಿ:
ಮಂಗಳವಾರ ರಾತ್ರಿ ಬಿಜೆಪಿ ಮೊದಲ ಪಟ್ಟಿ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಬಂಡಾಯದ ಬೀತಿ ಶುರುವಾಗಿದೆ. ಕಳೆದ ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಮತಗಳ ಅಂತರದಲ್ಲಿ ಸೋತಿದ್ದ 52 ಕ್ಷೇತ್ರಗಲ್ಲಿ ಮಾಜಿಗಳನ್ನು ಪಕ್ಕಕ್ಕಿಟ್ಟು ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದಂತೆಯೇ ಅಥಣಿ ಕ್ಷೇತ್ರದ ಲಕ್ಷ್ಮಣ್ ಸವದಿ, ಬೆಳಗಾವಿ ಉತ್ತರದ ಅನಿಲ ಬೆನಕೆ ಸೇರಿದಂತೆ ಹಲವರು ಟಿಕೆಟ್ ಸಿಗದಿದ್ದರೆ ಬಿಜೆಪಿಗೆ ಗುಡ್ ಬಾಯ್ ಹೇಳುವ ಮುನ್ಸೂಚನೆ ನೀಡಿದ್ದು ಹೈಕಮಾಂಡ್ ಇವರ ಮನವಲಿಸುವಲ್ಲಿ ವಿಫಲವಾದರೆ ಬೆಂಬಲಿಗರ ಮತ್ತು ಸಮುದಾಯದ ಮತಗಳು ವಡೆದು ಬಿಜೆಪಿಗೆ ಪೆಟ್ಟು ಬೀಳುವುದು ಖಚಿತ.
ನಿಷ್ಠಾವಂತ ಕಾರ್ಯಕರ್ತನ್ನು ಕಡೆಗಣಿಸಿತೆ ಬಿಜೆಪಿ?:
ಮೋದಿ ಪರ್ವ ಶುರುವಾದಾಗಿನಿಂದಲೂ ಬಿಜೆಪಿ ಗೆಲ್ಲುವ ಕುದುರೆ ಎನ್ನುವಂತೆ ನಾಗಾಲೋಟ ಶುರುಮಾಡಿದೆ. ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು ಗೆದ್ದೆಗೆಲ್ಲುತ್ತೆವೆ ಎಂಬ ವಿಶ್ವಾಸ ಇಟ್ಟುಕೊಂಡಿರುವ ಬಿಜೆಪಿ ಇದೇ ಕಾರಣಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದೆಯೇ ಎಂಬ ಚರ್ಚೆ ಕಾರ್ಯಕರ್ತರ ಮದ್ಯೆ ಜೋರಾಗಿದೆ. ಇಪ್ಪತ್ತು ಮೂವತ್ತು ವರ್ಷಗಳಿಂದ ಪಕ್ಷಕ್ಕೆ ದುಡಿದ ಮತ್ತು ಕ್ಷೇತ್ರದಲ್ಲಿ ತಮ್ಮದೆಯಾದ ಹಿಡಿತ ಸಾಧಿಸಿದ ಜನಪ್ರತಿನಿಧಿಗಳನ್ನು ಪಕ್ಷಾಂತರವಾಗಿ ಬಂದ ಅಭ್ಯರ್ಥಿಗಳಿಗಾಗಿ ಸೈಡ್ ಲೈನ್ ಮಾಡಿದ್ದು ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲವೇ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಬೆಂಬಲಿಗರ ಸಮಾವೇಶದಲ್ಲಿ ಲಕ್ಷ್ಮಣ ಸವದಿಯು ನನ್ನ ಮುಂದಿನ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಲು ನಿಮ್ಮ ಸಹಕಾರ ನೀಡಿ ಎಂದು ಭಾವುಕ ಭಾಷಣ ಮಾಡಿದ್ದು ಇದಕ್ಕೊಂದು ಉದಾಹರಣೆಯಾಗಿದೆ.
ನಂಬಿ ಬಂದವರಿಗಾಗಿ ಮೂಲ ಅಭ್ಯರ್ಥಿಗಳಿಗೆ ನಿರಾಸೆ:
ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ರಚಿಸಲು ಕಾಂಗ್ರೆಸ್ನಿಂದ ಬಂದಿದ್ದ ಶಾಸಕರುಗಳನ್ನ ಈ ಭಾರಿ ಚುನಾವಣೆಯಲ್ಲಿ ಕಡೆಗಣಿಸಿದರೆ ವಿಶ್ವಾಸದ್ರೋಹ ಮಾಡಿದಂತಾಗುತ್ತದೆ ಎಂಬ ಕಾರಣಕ್ಕಾದರೂ ವಲಸೆ ಬಂದ ನಾಯಕರುಗಳಿಗೆ ಟಿಕೆಟ್ ನೀಡುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಮಾಜಿ ಅಭ್ಯರ್ಥಿಗಳನ್ನು ಬಿಟ್ಟು ವಲಸೆ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಮೂಲ ಅಭ್ಯರ್ಥಿಗಳ ಅಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಟಿಕೆಟ್ ಸಿಗದಿದ್ದರೆ ತಾವು ಬೇರೆ ಪಕ್ಷಕ್ಕೆ ವಲಸೆ ಹೋಗುವ ಮುನ್ಸೂಚನೆ ನೀಡುತ್ತಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆ ಮೊದಲೇ ಅಭ್ಯರ್ಥಿಗಳಿಂದ ಎಚ್ಚರಿಕೆಯ ಕರೆಗಂಟೆ:
ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಇನ್ನುಳಿದ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದೆ. ಹುಬ್ಬಳ್ಳಿಯಿಂದ ಜಗದೀಶ ಶೆಟ್ಟರ್ ಸೇರಿದಂತೆ ಹಲವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಪಕ್ಷ ಟಿಕೆಟ್ ನೀಡದಿದ್ದರೂ ಚುನಾವಣಾ ಸ್ಪರ್ಧೆ ಖಚಿತ ಎಂದು ಹೇಳುವುದರ ಮೂಲಕ ಹೈಕಮಾಂಡಗೆ ಮುಂಚಿತ ಎಚ್ಚರಿಕೆ ನೀಡುತ್ತಿದ್ದು ಹೇಗಾದರೂ ಟಿಕೆಟ್ ಪಡೆದು ಸ್ಪರ್ಧೆಯಲ್ಲಿರಲೇ ಬೇಕು ಎಂಬ ಹಂಬಲ ಶುರು ವಾಗಿದೆ.
ಒಟ್ಟಿನಲ್ಲಿ 2023ರ ಚುನಾವಣೆ ಬಿಜೆಪಿಗೆ ಕಗ್ಗಂಟಾಗಿದ್ದು ಹೊಸ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನದ ಜೊತೆಗೆ ಹಳೆ ಅಭ್ಯರ್ಥಿಗಳು ಪಕ್ಷದಿಂದ ಹಿಂದೆ ಸರಿಯದಂತೆ ನೋಡಿಕೊಳ್ಳುವ ಹೊಣೆ ಹೈಕಮಾಂಡ್ ಮೇಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


